Mysore
29
few clouds

Social Media

ಶನಿವಾರ, 03 ಜನವರಿ 2026
Light
Dark

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತ ಸಿನಿಮಾ ಬಿಡುಗಡೆ ಯಾವಾಗ ಗೊತ್ತಾ.?

ನವದೆಹಲಿ: ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಅವರು, ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತಾದ ಎಮರ್ಜೆನ್ಸಿ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದು, ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಿಸಿದ್ದಾರೆ.

ನಟಿ ಹಾಗೂ ನಿರ್ದೇಶಕಿ ಕಂಗನಾ ರಾಣಾವತ್‌ ಅವರು ಈಗ ಬಿಜೆಪಿ ಸಂಸದೆಯಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ, ನಿರ್ದೇಶಕಿಯಾಗಿ ಗಮನ ಸೆಳೆದಿದ್ದ ಕಂಗನಾ ಇನ್ನು ಮುಂದೆ ಸಂಸದೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಂಗನಾ ಚುನಾವಣೆಗೂ ಸ್ಪರ್ಧಿಸುವ ಮುಂಚೆ ಇಂದಿರಾ ಗಾಂಧಿ ಕುರಿತಾದ ಎಮರ್ಜೆನ್ಸಿ ಸಿನಿಮಾದಲ್ಲಿ ನಟಿಸಿದ್ದರು. ಚುನಾವಣೆ ಕಾರಣಕ್ಕೆ ಈ ಸಿನಿಮಾದ ಬಿಡುಗಡೆ ಮುಂದೂಡಲಾಗಿತ್ತು. ಇದೀಗ ಸಿನಿಮಾದ ಬಿಡುಗಡೆಗೆ ದಿನಾಂಕ ಘೋಷಿಸಿದ್ದಾರೆ.

ಎಮರ್ಜೆನ್ಸಿ ಸಿನಿಮಾವನ್ನು ಕಂಗನಾ ಸೆಪ್ಟೆಂಬರ್.‌6ರಂದು ತೆರೆಗೆ ತರಲಿದ್ದಾರೆ. ಕಂಗನಾ ಸಂಸದೆಯಾಗಿ ಆಯ್ಕೆಯಾದ ಬಳಿಕ ಈ ಸಿನಿಮಾ ಬಿಡುಗಡೆ ಆಗುತ್ತೋ, ಇಲ್ಲವೋ ಎಂಬ ಅನುಮಾನ ಶುರುವಾಗಿತ್ತು. ಆದರೆ ಕೊನೆಗೂ ಸಿನಿಮಾದ ಬಿಡುಗಡೆ ದಿನಾಂಕವನ್ನು ಕಂಗನಾ ಘೋಷಣೆ ಮಾಡಿದ್ದಾರೆ. ಸಿನಿಮಾದಲ್ಲಿ ಕಂಗನಾ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕಂಗನಾ ರಾಣಾವತ್‌ ಅವರು, ಭಾರತ ಪ್ರಜಾಪ್ರಭುತ್ವದ ಕರಾಳ ಅಧ್ಯಾಯಕ್ಕೆ ಐವತ್ತು ವರ್ಷವಾದ ಹಿನ್ನೆಲೆಯಲ್ಲಿ ಎಮರ್ಜೆನ್ಸಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುತ್ತಿದ್ದೇನೆ. ಇದು ಸ್ವಾತಂತ್ರ್ಯ ಭಾರತದ ಅತ್ಯಂತ ವಿವಾದಾತ್ಮಕ ನಿರ್ಣಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಎಂದು ಕಂಗನಾ ರಾಣಾವತ್‌ ತಿಳಿಸಿದ್ದಾರೆ.

ಇನ್ನೂ ಕಂಗನಾ ಸಿನಿಮಾಗಳು ಒಂದರ ಹಿಂದೊಂದು ಸೋಲು ಕಂಡಿವೆ. ಈ ಸಿನಿಮಾದ ಮೂಲಕ ಕಂಗನಾ ಮತ್ತೆ ಗೆಲುವಿನ ಹಾದಿಗೆ ಮರಳಿದ್ದಾರೆ ಎನ್ನಲಾಗಿದೆ.

ಬಹಳ ತಿಂಗಳ ಹಿಂದೆ ಸಿನಿಮಾದ ಸಣ್ಣ ಟೀಸರ್‌ ಬಿಡುಗಡೆ ಆಗಿತ್ತು. ಟೀಸರ್‌ನಲ್ಲಿ ಕಂಗನಾ ರಾಣಾವತ್‌ ಅಭಿನಯ ಅದ್ಭುತವಾಗಿತ್ತು. ಆ ಟೀಸರ್‌ನಿಂದಲೇ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿದೆ.

Tags:
error: Content is protected !!