Mysore
21
clear sky

Social Media

ಬುಧವಾರ, 28 ಜನವರಿ 2026
Light
Dark

ಡಿಕೆ ಶಿವಕುಮಾರ್ ಹಾಕಿರುವ ಶಾಲಿನ ಬೆಲೆ ಕುರಿತು ರಾಜ್ಯ ಬಿಜೆಪಿ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು: ಕುರುಡು ಕಾಂಚಾಣ ಕುಣಿಯುತ್ತಿದೆ ಎಂಬುದಕ್ಕೆ ಡಿ.ಕೆ.ಶಿವಕುಮಾರ್‌ ಅವರು ನಡೆಸುತ್ತಿರುವ ಅಂಧ ದರ್ಬಾರ್‌ ಸಾಕ್ಷಿಯಾಗಿದೆ ಎಂದು ಬಿಜೆಪಿ ಟ್ವೀಟ್‌ ಮಾಡುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ನಮ್ಮ ಕಾಸ್ಟ್ಲಿ ಕುಮಾರ್‌ ಅವರು ಧರಿಸಿರುವ ಶಾಲಿನ ಬೆಲೆ ಬರೋಬ್ಬರಿ 59,500 ರೂಪಾಯಿ ಆಗಿದೆ. ಬೆಲೆ ಏರಿಕೆಯಿಂದ ಜನ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ತೆರಿಗೆ ದುಡ್ಡಿನಲ್ಲಿ ಶೋಕಿ ಮಾಡುತ್ತಿರುವುದು ನಿಜಕ್ಕೂ ದುರಂತ ಎಂದು ಕಿಡಿಕಾರಿದೆ.

ಇನ್ನು ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿತ್ತು. ಸರ್ಕಾರದ ನಡೆಗೆ ಸಾರ್ವಜನಿಕರು ಸೇರಿದಂತೆ ಬಿಜೆಪಿ ನಾಯಕರು ಭಾರೀ ಆಕ್ರೋಶ ಹೊರಹಾಕಿದ್ದರು.

ಆದರೆ ಈಗ ಬೆಲೆ ಏರಿಕೆ ಮಾಡಿ ಉಪಮುಖ್ಯಮಂತ್ರಿ ಆದವರೇ ಈ ರೀತಿ ಶೋಕಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ದುಬಾರಿ ಲೈಫಿಗೆ ಬಿಜೆಪಿ ನಾಯಕರು ಕೆಂಡ ಕಾರಿದ್ದಾರೆ.

Tags:
error: Content is protected !!