Mysore
18
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ನಕಲಿ ಮದ್ಯ ಸೇವನೆ ದುರಂತ: ಸಂತ್ರಸ್ತರನ್ನು ಭೇಟಿಯಾದ ಕಮಲ್‌

ತಮಿಳುನಾಡು: ತಮಿಳುನಾಡಿನ ಕಲ್ಲಕುರಿಚ್ಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆಯಿಂದ ಭಾರೀ ಅನಾಗುತದಿಂದ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಈ ನಡುವೆ ಕಲ್ಲಕುರಿಚ್ಚಿಯಲ್ಲಿ ಮದ್ಯ ಸೇವನೆಯಿಂದ 185 ಮಂದಿ ಅಸ್ವಸ್ಥರಾಗಿದ್ದು, ಕಲ್ಲಕುರಿಚ್ಚಿ, ಪುದುಚೇರಿ, ಸೇಲಂ ಹಾಗೂ ವಿಲ್ಲುಪುರಂ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು (ಜೂನ್‌. 23) ಈ ಎಲ್ಲಾ ಆಸ್ಪತ್ರೆಗಳಿಗೆ ಮಕ್ಕಳ್‌ ನೀಧಿ ಮೈಯಂ (ಎಂಎನ್‌ಎಂ) ಮುಖ್ಯಸ್ಥ ಹಾಗೂ ನಟ ಕಮಲ್‌ ಹಾಸನ್‌ ಅವರು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.

ಬಳಿಕ ಮಾತನಾಡಿ ಅವರು, ಈ ಸಂತ್ರಸ್ತರು ತಮ್ಮ ಮಿತಿಯನ್ನು ಮೀರಿದ್ದಾರೆ ಮತ್ತು ಅವರು ಅಸಡ್ಡೆ ಹೊಂದಿದ್ದಾರೆಂದು ಅರ್ಥಮಾಡಿಕೊಳ್ಳಬೇಕು. ಅವರು ಜಾಗರೂಕರಾಗಿರಬೇಕು. ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅವರಿಗೆ ಸಲಹೆ ನೀಡುವ ಮನೋವೈದ್ಯಕೀಯ ಕೇಂದ್ರಗಳನ್ನು ರಚಿಸಬೇಕೆಂಬುದು ನನ್ನ ಮನವಿಯಾಗಿದೆ… ಅದು ಸಾಂದರ್ಭಿಕವಾಗಿ ಕುಡಿಯಬೇಕು, ಯಾವುದೇ ರೂಪದಲ್ಲಿ ಮಿತಿ ಮೀರಿದರೆ ಅದು ಕೆಟ್ಟದ್ದಾಗಿರುತ್ತದೆ ಎಂದು ಅವರು ಅರ್ಥಮಾಡಿಕೊಳ್ಳಬೇಕು ಎಂದು ಕಮಲ್‌ ಹೇಳಿದ್ದಾರೆ.

ಜೂನ್‌.19ರಂದು ಕಲ್ಲಕುರಿಚಿಯಲ್ಲಿ ನಕಲಿ ಮದ್ಯಸೇವನೆಯಿಂದ 50ಕ್ಕೂ ಅಧಿಕ ಮಂದಿ ಮೃತರಾಗಿದ್ದು, ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಮತ್ತು ಮೃತರ ಸಂಬಂಧಿಕರಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದೆ.

https://x.com/ANI/status/1804803885422493735

Tags:
error: Content is protected !!