Mysore
19
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಸೂರಜ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ: ಜಿ.ಟಿ ದೇವೇಗೌಡ

ಮೈಸೂರು: ಸೂರಜ್ ರೇವಣ್ಣ ಬಂಧನ ವಿಚಾರಕ್ಕೆ ಸಂಬಂಧಪಟ್ಟಂತೆ ನಗರದಲ್ಲಿಂದು ಮಾಧ್ಯಮಪ್ರತಿನಿಧಿಗಳು ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡರನ್ನ ಪ್ರತಿಕ್ರಿಯೆ ಕೇಳಿದಾಗ ಪೊಲೀಸ್ ಅವರನ್ನು ಅರೆಸ್ಟ್ ಮಾಡಿದ್ದು ತನಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ಬಳಿಕ ಮಾತನಾಡಿದ ಶಾಸಕರು ಸೂರಜ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ನನ್ನ ಮಗ ಅಥವಾ ಕುಟುಂಬಸ್ಥರು ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಪ್ರಜ್ವಲ್ ರೇವಣ್ಣ ವಿಷಯದಲ್ಲಿ ನಾವು ಇದೇ ನಿಲುವನ್ನು ತೆಗೆದುಕೊಂಡಿದ್ದೆವು ಮತ್ತು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದೆವು ಎಂದು ಹೇಳಿದರು.

ಅಲ್ಲದೇ ಮೊನ್ನೆ ನಡೆದ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಯಾರೋ ಸಚಿವರು ದರ್ಶನ್ ವಿಷಯ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಥ ವಿಷಯಗಳ ಬಗ್ಗೆ ಚರ್ಚೆ ಬೇಡ, ತಪ್ಪು ಮಾಡಿದವರು ಯಾರೇ ಆಗಿರಲಿ, ಕಾನೂನಿನ ಪ್ರಕಾರ ಶಿಕ್ಷೆಯಾಗಲೇಬೇಕು ಎಂದಿದ್ದಾರೆ. ನಾವು ಅಷ್ಟೇ ನಮ್ಮ ಪಕ್ಷ ತಪ್ಪು ಮಾಡಿದವರ ಜೊತೆ ಎಂದಿಗೂ ನಿಂತುಕೊಳ್ಳುವುದಿಲ್ಲ ಎಂದರು.

Tags:
error: Content is protected !!