Mysore
30
clear sky

Social Media

ಬುಧವಾರ, 22 ಜನವರಿ 2025
Light
Dark

ಭಾನುವಾರ ನಡೆಯಬೇಕಿದ್ದ ನೀಟ್‌ ಪ್ರವೇಶ ಪರೀಕ್ಷೆ ಮುಂದೂಡಿಕೆ

ನವದೆಹಲಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಯುಜಿಸಿ-ನೆಟ್‌ ಅಕ್ರಮದ ಕೋಲಾಹಲದ ನಡುವೆ ಎನ್‌ಟಿಎ ಸಂಸ್ಥೆಯು ಮತ್ತೊಂದು ಪರೀಕ್ಷೆಯನ್ನು ಮುಂದೂಡಿದೆ.

ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಟಿಎ) ನಡೆಸುವ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಿ ಆರೋಗ್ಯ ಸಚಿವಾಲಯ ಶನಿವಾರ ರಾತ್ರಿ ಆದೇಶ ಹೊರಡಿಸಿದೆ. ಅಂದ್ಹಾಗೆ, ಪ್ರವೇಶ ಪರೀಕ್ಷೆ ನಾಳೆ ಅಂದರೆ ಜೂನ್ 23 ರಂದು ನಡೆಯಬೇಕಿತ್ತು.

ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಯ ಬಗ್ಗೆ ಇತ್ತೀಚಿನ ಆರೋಪಗಳನ್ನು ಪರಿಗಣಿಸಿ ಆರೋಗ್ಯ ಸಚಿವಾಲಯವು ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಿದೆ. ಪ್ರವೇಶ ಪರೀಕ್ಷೆಯ ಹೊಸ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಸಚಿವಾಲಯವು ಹೇಳಿದೆ.

Tags: