Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗಾಭ್ಯಾಸ ಸಹಕಾರಿ: ಇಒ ಮಮತಾ. ಎಲ್

ಮಳವಳ್ಳಿ : ದೇಶದ ಅನೇಕ ಋಷಿ ಮುನಿಗಳು ಹಾಗೂ ಸಾಧಕರಿಂಧ ಸಿದ್ಧಿಸಿದ ಯೋಗಭ್ಯಾಸವು  ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಕೊಡುಗೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಮತಾ ಹೇಳಿದರು.

ತಳಗವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಕ್ಯಾತಮ್ಮನಕಟ್ಟೆ ಅಮೃತ ಸರೋವರ ಕೆರೆ ದಡದಲ್ಲಿ 10ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಶ್ವ ಸಂಸ್ಥೆ ಸೇರಿ ವಿಶ್ವದ ಅನೇಕ ದೇಶಗಳು ಇಂದು ಯೋಗ ದಿನ ಆಚರಿಸುತ್ತಿವೆ. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗಾಭ್ಯಾಸ ಸಹಕಾರಿಯಾಗಿದೆ. ಕೂಲಿಕಾರರು ದಿನಪೂರ್ತಿ ಕುಟುಂಬ ನಿರ್ವಹಣೆ, ಹೊರಗಡೆ ದುಡಿಮೆ ಹಾಗೂ ಮಕ್ಕಳ ಲಾಲನೆ ಪಾಲನೆಯಲ್ಲಿ ನಿರತರಾಗಿರುವ ಮಹಿಳೆಯರು ಸದಾ ಒತ್ತಡದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ನಾವು ದಿನ ಪೂರ್ತಿ ದುಡಿಯುತ್ತೇವೆ ನಮಗೇಕೆ ಯೋಗ ಎಂದು ಉದಾಸೀನ ಮಾಡದೇ ಪ್ರತಿ ದಿನ ಬೆಳಗ್ಗೆ ಅಥವಾ ಸಂಜೆ ಒಂದರ್ಧ ಗಂಟೆ ಯೋಗಭ್ಯಾಸಕ್ಕೆ ಮೀಸಲಿಟ್ಟರೆ, ದೈಹಿಕ ಸದೃಢತೆ ಜೊತೆಗೆ ನೆಮ್ಮದಿ ಕಂಡುಕೊಳ್ಳಬಹುದಾಗಿದೆ ಎಂದರು.

ಪ್ರಸ್ತುತ ಬದಲಾದ ಆಹಾರ ಶೈಲಿ, ಜೀವನ ಕ್ರಮದಿಂದ ಇಂದು ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ ಅದ್ದರಿಂದ ಮುಂಜಾಗ್ರತೆ ವಹಿಸುವುದು ತುಂಬಾ ಅವಶ್ಯವಾಗಿದೆ‌. ದುಶ್ಚಟಗಳನ್ನು ತ್ಯಜಿಸಿ, ಉತ್ತಮ ಆಹಾರ, ಗಾಳಿ ಸೇವಿಸುದರ ಮೂಲಕ ಆರೋಗ್ಯ ಕ್ಷಮತೆ ಸಾಧಿಸಬಹುದು. ಗ್ರಾಮೀಣರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಗ ದಿನಾಚರಣೆ ಏರ್ಪಡಿಸಿರುವುದು ಶ್ಲಾಘನೀಯ ‌ಕಾರ್ಯ ಎಂದರು.

ಈ ಸಂದರ್ಭದಲ್ಲಿ ಪಿಡಿಒ ರೇಣುಕಾ, ಯೋಗ ಶಿಕ್ಷಕರಾದ ಚಂದ್ರಶೇಖರ ಎಂ.ಬಿ, ಶಾಲಾ ಶಿಕ್ಷಕರು, ತಾಲ್ಲೂಕು ಐಇಸಿ ಸಂಯೋಜಕರಾ ಸುನಿಲ್ ಕುಮಾರ್. ಹೆಚ್, ತಾಂತ್ರಿಕ ಸಹಾಯಕರಾದ ನಿತಿನ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಶಾಲಾ ಮಕ್ಕಳು, ಕೂಲಿಕಾರರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.

Tags: