Mysore
28
overcast clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಮುಂಜಾವದ ಇಬ್ಬನಿಯಲ್ಲಿ ಯೋಗದ ಸುಯೋಗ

ಹನಿ ಉತ್ತಪ್ಪ

ಆವತ್ತು ಒಂದು ದಿನ ಹೀಗೆ ಓಡಾಡುತ್ತಿದ್ದೆ. ಪಾರ್ಕಿನಲ್ಲಿ ಹಿರಿಯರೊಂದಷ್ಟು ಜನ ಯೋಗ ಮಾಡುತ್ತಿದ್ದರು. ಹನಿ ಇಬ್ಬನಿಗಳ ಮೇಲೆ ಮ್ಯಾಟ್ ಹಾಸಿಕೊಂಡು, ಮಾತಾಡದೆ ತಧೇಕಚಿತ್ತದಿಂದ ಸುತ್ತಲಿನ ಹಕ್ಕಿಗಳ ಚಿಲಿಪಿಲಿಯನ್ನು ಆಲಿಸುತ್ತ ನಿರತರಾಗಿದ್ದರು. ಇದು ಪ್ರತಿದಿನವೂ ಮರುಕಳಿ ಸುತ್ತಲಿತ್ತು. ಮಾತಾಡಿಸಬೇಕೆಂದು ನನಗೋ ಆತುರ. ನಿತ್ಯ ಬರುತ್ತಿದ್ದ ಪರಿಚಯ ಮುಖವಾಗಿ ದ್ದಕ್ಕೆ ಅವರೆಲ್ಲ ಯೋಗ ಮುಗಿಸಿದ ಮೇಲೆ ನಗುತ್ತಾ, ಅರೆಕ್ಷಣ ಮಾತಿಗೆಂದು ನಿಲ್ಲುತ್ತಿದ್ದರು. ಕುತೂಹಲದಲ್ಲಿ ಕೇಳಿಯೇ ಬಿಟ್ಟೆ. ದಿನಾಲೂ ಯೋಗ ಮಾಡುವ ಹುಮ್ಮಸ್ಸು ಅದೆಲ್ಲಿಂದ ಬರುತ್ತದೆ? ಪ್ರಶ್ನೆಗೆ ಅವರೆಲ್ಲ ಒಂದುಕ್ಷಣ ನಕ್ಕುಬಿಟ್ಟರು. ನನಗೊ ಸುಮ್ಮನೆ ಬೇರೇನಾದರೂ ಕೇಳಬೇಕಿತ್ತು ಎಂದು ಅನಿಸುತ್ತಿತ್ತು. ನನ್ನ

ಮುಜುಗರವನ್ನು ಅರ್ಥಮಾಡಿಕೊಂಡವರಂತೆ, ಉತ್ತರದ ನೆಪದಲ್ಲಿ ಸಂತೈಸಿದರು. ಯೋಗ ಮಾಡುವುದೆಂದರೆ ಅವರಿಗೆ ಹೊಸ ಉಲ್ಲಾಸ; ಮುಂಜಾನೆಯಲ್ಲಿ ಓಡಾಡುವುದೆಂದರೆ ಎಲ್ಲಿಲ್ಲದ ಸಂಭ್ರಮ. ಯೋಗವನ್ನು ಮಾಡುವು ದಕ್ಕೆ ಆರಂಭಿಸಿ, ಒಂದೂವರೆ ವರ್ಷಗಳಾಗಿವೆ. ಮೊದಮೊದಲು, ಕಾಲ್ನಡಿಗೆಯಲ್ಲಿ ಬೆಳಗನ್ನು ಆನಂದಿಸುತ್ತಿದ್ದ ಅವರಿಗೆ ಇನ್ನಷ್ಟು ಚೈತನ್ಯ ನೀಡಿದ್ದು ಯೋಗವೆಂದು ಹೇಳುತ್ತಾರೆ. ಮಳೆ, ಚಳಿಯಲ್ಲಿ ಚೆನ್ನಾಗಿ ನಿದ್ರೆ ಮಾಡುವು ದನ್ನು ಬಿಟ್ಟು, ಈ ವಯಸ್ಸಿನಲ್ಲಿ ಇವರಿಗೇನು ಯೋಗ ಮಾಡುವ ಆಸೆ ಎಂದು ಅಕ್ಕಪಕ್ಕದ ಮನೆಯ ಗೆಳತಿಯರೇ ಕೇಳಿದ್ದರು. ‘ನೋಡಮ್ಮಾ, ಮನೆಕೆಲ್ಸ ಎಷ್ಟೇ ಮಾಡಿದ್ರೂ ಮುಗೀತಪ್ಪಾ ಅನ್ನೊದಿಲ್ಲ. ಮಾಡಿದಷ್ಟೂ ಮತ್ತಷ್ಟು ಕೆಲ್ಸ ಇರತ್ತೆ. ಬದುಕಿಡೀ ಮನೆಗಾಗಿ ಕಷ್ಟಪಟ್ವಿ. ಈಗ್ಲಾದ್ರೂ ನಮಗಾಗಿ ಒಂದಷ್ಟು ಟೈಂ ಕೊಟ್ಕೊಳ್ಳೋದು ಬೇಡ್ವಾ? ’ ಎಂಬ ಅವರ ಬದುಕಿನಲ್ಲಿ ಯೋಗ ತಂದ ಜೀವನೋತ್ಸಾಹಕ್ಕೆ ಬೆರಗಾಗಬೇಕು.

ಒಮ್ಮೊಮ್ಮೆ ಮೈಕೈ ನೋವಿನಲ್ಲಿ ನಾಳೆ ಯೋಗಕ್ಕೆ ಹೋಗುವುದು ಬೇಡ ಎಂದು ತೀರ್ಮಾನಿಸಿ ಮಲಗಿದವರು ಬೆಳಗಾಗುತ್ತಿದ್ದಂತೆ, ಸರಿಯಾಗಿ ಐದು ಗಂಟೆಯ ಹೊತ್ತಿಗೆ ಎದ್ದು, ಯೋಗಕ್ಕೆ ಹೊರಡುತ್ತಾರೆ. ‘ದೇಹಕ್ಕೆ, ಅದಕ್ಕಿಂತ ಹೆಚ್ಚು ಮನಸ್ಸಿಗೆ ಯೋಗ ಹಿಡಿಸಿಬಿಟ್ಟಿದೆಯಮ್ಮಾ’, ಮುಖದ ತುಂಬ ನಗು ತುಂಬಿ ಹೇಳುತ್ತಾರೆ. ತರುಣರಷ್ಟು ನಮ್ಯವಾಗಿ ಯೋಗ ಮಾಡಲಾಗದಿ ದ್ದರೂ ಉತ್ಸಾಹ ಮಾತ್ರ ಸ್ವಲ್ಪವೂ ಕಡಿಮೆಯಾ ಗಿಲ್ಲ. ಇವತ್ತಿಗೂ ವೃಕ್ಷಾಸನ, ಗರುಡಾಸನ,

ಭುಜಂಗಾಸನ, ಸೂರ್ಯನಮಸ್ಕಾರ, ಪ್ರಾಣಾಯಾಮಗಳೆಲ್ಲ ಬಹು ಇಷ್ಟವಾದವು. ಮಧುಮೇಹದಂತಹ ಸಮಸ್ಯೆ ಇದ್ದವರಿಗೆ ಭುಜದಲ್ಲಿ ಬಿಗಿಹಿಡಿತವಿರುತ್ತದೆ. ಅದರ ಸೆಳೆತ, ನೋವು ಯಾತನೆ ಉಂಟುಮಾಡುವಂಥದ್ದು. ಯೋಗ ಮಾಡಿದ ಸ್ವಲ್ಪ ದಿನಕ್ಕೆ ಫಲಿತ ದೊರೆತು, ಭುಜವನ್ನು ಹಿಂದಕ್ಕೆ, ಮುಂದಕ್ಕೆ ಬಾಗಿಸುವ ಶಕ್ತಿ ಪಡೆದರು. ಹಿರಿಯರಾಗುತ್ತಿದ್ದಂತೆ ದೇಹ ಜಡವಾಗುತ್ತಾ ಹೋಗುತ್ತದೆ. ಆ ಜಡತ್ವ ಅಳಿಸಿ ಕ್ರಿಯಾಶೀಲರಾಗಿರುವಂತೆ ಮಾಡಿರುವಲ್ಲಿ ಯೋಗದ ಪಾತ್ರ ಬಹಳಷ್ಟಿದೆ. ಕೆಲವೊಂದು ಸಲ ಬೇರೆಯವರಿಂದ ಬೇಸರ ವಾಗುತ್ತದೆ. ಹಿರಿಯರಾಗುತ್ತಿದ್ದಂತೆ ತಮ್ಮ ವರ್ತನೆ ಗಳೇ ತಮಗೆ ನೋವುಂಟುಮಾಡುತ್ತವೆ. ಅಂತಹ ಸಂದರ್ಭದಲ್ಲಿ ಎಲ್ಲ ಮಾನಸಿಕ ತಳಮಳಗಳು ಶಾಂತವಾಗುವುದು, ಮುಂಜಾನೆಯ ತಂಗಾಳಿ ಯಲ್ಲಿ ನಡೆದಾಡಿದಾಗ. ಅದರಲ್ಲೂ ಯೋಗ, ಧ್ಯಾನವೆಲ್ಲ ಮನಸ್ಸಿಗೆ ವಿಶೇಷ ನೆಮ್ಮದಿಯನ್ನು

ನೀಡುತ್ತದೆಂದು ಸಂತೃಪ್ತಿಯಿಂದ ಹೇಳುತ್ತಾರೆ. ಹಸಿರಿನ ಜೊತೆ ಉಸಿರು ಬೆರೆಯುವುದು ಅವರೆಲ್ಲರ ಪಾಲಿಗೆ ‘ಯೋಗ- ಸುಯೋಗ’ ಗುಂಪಿನಲ್ಲಿ ಮಾಡುವಾಗ, ಕೆಲ ಆಸನಗಳನ್ನು ಮಾಡಲಾಗದಿದ್ದರೂ ಪ್ರಯತ್ನಿಸೋಣ ಎಂದೆನಿಸು ತ್ತದೆ. ಇದು ಸಾಂಘಿಕ ಶಕ್ತಿ ಎಂಬುದು ಅವರ ಅಭಿ ಪ್ರಾಯ. ನಮ್ಮೊಳಗನ್ನು ಯೋಗದಿಂದ ಅರಿಯು ತ್ತಿದ್ದೇವೆ ಎನ್ನುತ್ತಾ ಇಳಿವಯಸ್ಸಿನಲ್ಲೂ ಅವರೆಲ್ಲರ ಆರೋಗ್ಯವನ್ನು ಯೋಗ ಕಾಪಾಡುತ್ತಿದೆ.

Tags:
error: Content is protected !!