Mysore
19
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹಿರಿಯ ರಂಗಕರ್ಮಿ ನಾ.ರತ್ನ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು : ಹಿರಿಯ ರಂಗಕರ್ಮಿ ಡಾ.ನಾ.ರತ್ನ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರು, ನಾ.ರತ್ನ ಅವರ ನಿಧನ ಎಂದಿಗೂ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಅಧ್ಯಾಪನ ಮತ್ತು ರಂಗ ಚಟುವಟಿಕೆಗಳ ಜೊತೆ ಜೊತೆಗೆ ಮೈಸೂರಿನ ಪ್ರಖ್ಯಾತ ವಾಕ್‌ ಶ್ರವಣ ಚಿಕಿತ್ಸಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅವರು ದೈಹಿಕ ನ್ಯೂನ್ಯತೆ ಹೊಂದಿದ್ದ ಸಾವಿರಾರು ಜನರ ಪಾಲಿನ ಜೀವದಾತರಾಗಿದ್ದರು ಎಂದು ಹೇಳಿದ್ದಾರೆ.

ಈ ಪುಣ್ಯ ಪುರುಷನ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ  ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

Tags: