Mysore
30
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಇಂದು ಮೈಸೂರಿಗೆ ನಟ ದರ್ಶನ್‌!

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಖ್ಯಾತ ನಟ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಟ ಚಿಕ್ಕಣ್ಣ ಸೇರಿದಂತೆ ಇತರೆ ಸೆಲೆಬ್ರೆಟಿಸ್‌ಗೂ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಟ ದರ್ಶನ್‌ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಶೆಡ್‌, ಸ್ಟೋನಿ ಬ್ರೂಕ್‌ ಹಾಗೂ ಕಾಮಾಕ್ಷಿ ಪಾಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

ಕೊಲೆ ನಡೆದ ಮರುದಿನ ದರ್ಶನ್‌ ಅವರು ಮೈಸೂಗೆ ವಾಪಸಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇತ್ತ ಶೂಟಿಂಗ್‌ ಜತೆ ಪ್ರಕರಣದಲ್ಲಿ ಉಳಿದವರು ಶರಣಾಗಲು ಹಿಂದೇಟು ಹಾಕಿದ ವೇಳೆ ಅವರ ಮನವೊಲಿಸಲು ಮೈಸೂರಿಗೆ ಕರೆಸಿರುವುದಾಗಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಈ ಹಿನ್ನೆಲೆ ನಟ ದರ್ಶನ್‌, ಪವನ್‌, ನಾಗರಾಜ್‌ ನಂದೀಶ್‌ ಅವರನ್ನು ಮೈಸೂರಿಗೆ ಕರೆತಂದು ಸ್ಥಳ ಮಹಜರು ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ದರ್ಶನ್‌ ಉಳಿದುಕೊಂಡಿದ್ದ ಖಾಸಗಿ ಹೋಟೆಲ್‌ ಸೇರಿದಂತೆ ಅವರು ಫಾರ್ಮ್‌ ಹೌಸ್‌ ಇತರೆ ಸ್ಥಳಗಳಲ್ಲಿ ಮಹಜರು ನಡೆಸುವ ಸಾಧ್ಯತೆಯಿದೆ.

Tags: