ನವದೆಹಲಿ: ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬಗ್ಗೆ ಭಾರತದಲ್ಲಿ ಅಲ್ಲದೇ ವಿಶ್ವದೆಲ್ಲೆಡೆ ಅಪಸ್ವರ ಎದ್ದಿದೆ. ಟೆಸ್ಲಾ ಸಂಸ್ಥೆಯ ಸಿಇಒ ಹಾಗೂ ಉದ್ಯಮಿ ಎಲಾನ್ ಮಸ್ಕ್ ಅವರು ಇವಿಎಂ ಗಳು ಹ್ಯಾಕ್ ಆಗುವ ಸಾಧ್ಯತೆಗಳಿದ್ದು, ಇವಿಎಂಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳನ್ನು ತೊಲಗಿಸಬೇಕು. ಇವುಗಳನ್ನು ಮನಷ್ಯರು ಹಾಗೂ ಎಐ (ಕೃತಕ ಬುದ್ಧಿಮತ್ತೆ) ನಿಂದ ಹ್ಯಾಕ್ ಮಾಡುವ ಅಪಾಯ ಹೆಚ್ಚಿರುತ್ತದೆ ಎಂದಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರು ಪ್ಯೊರ್ಟೋ ರಿಕೋ ದೇಶದ ಚುನಾವಣೆಯಲ್ಲಿ ನಡೆದ ಇವಿಎಂ ಅಕ್ರಮಗಳ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ್ದಾರೆ. ಈ ಪೋಸ್ಟ್‌ಗೆ ಎಲಾನ್ ಮಸ್ಕ್ ಪ್ರತಿಕ್ರಿಯಿಸಿ, ಇವಿಎಂ ಹ್ಯಾಕ್ ಆಗುವ ಸಾಧ್ಯತೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ಚುನಾವಣೆಗೂ ಮುನ್ನ ಎಲೆನ್ ಮಸ್ಕ್ ನೀಡಿರುವ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಭಾರತದಲ್ಲಿಯೂ ಕೂಡ ವಿಪಕ್ಷ ನಾಯಕರೂ ಧನಿಗೂಡಿಸಿದ್ದಾರೆ.
ಮಸ್ಕ್ ಅವರ ಈ ಪೋಸ್ಟ್‌ಗೆ ಭಾರತದ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿ, ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ಭಾತರದ ಇವಿಎಂಗಳ ಬಗ್ಗೆ ಇವರಿಗೆ ಕಲಿಸಿಕೊಡುವ ಅಗತ್ಯವಿದೆ ಎಂದಿದ್ದಾರೆ. ಅಷ್ಟೆ ಅಲ್ಲದೇ ಭಾರತದಲ್ಲಿರುವ ಇವಿಎಂಗಳು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿವೆ. ಇವಿಎಂಗಳಿಗೆ ವೈಫೈ, ಇಂಟರ್ನೆಡ್, ಬ್ಲೂಟೂತ್ ಕನೆಕ್ಷನ್ ಇರುವುದಿಲ್ಲ. ಇವುಗಳನ್ನು ರೀಪ್ರೋಗ್ರಾಮಿಂಗ್ ಮಾಡುಲು ಕೂಡ ಸಾಧ್ಯವಿಲ್ಲ. ಹೀಗಿದ್ದಾಗ, ಹ್ಯಾಕ್ ಆಗಲು ಹೇಗೆ ಸಾಧ್ಯ. ಈ ವಿಚಾರದಲ್ಲಿ ಮಸ್ಕ್ ಗೆ ಪಾಠ ಮಾಡಲು ನಾವು ತಯಾರು ಎಂದು ಪ್ರತ್ರಿಕ್ರಿಯಿಸಿದ್ದಾರೆ.
ಮಸ್ಕ್ ಅವರು ಕೂಡ ಇದಕ್ಕೆ ಉತ್ತರಿಸುತ್ತಾ, ʼಏನನ್ನೂ ಬೇಕಾದರೂ ಹ್ಯಾಕ್ ಮಾಡಬಹುದುʼ ಎಂದು ಒನ್ ಲೈನ್‌ನಲ್ಲಿ ತಿಳಿಹೇಳಿದ್ದಾರೆ.
ಈ ಇಬ್ಬರ ವಾಗ್ವಾದದಲ್ಲಿ ಪ್ರವೇಶಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲನ್ ಮಸ್ಕ್ ಅವರ ಅಭಿಪ್ರಾಯವನ್ನು ಬೆಂಬಲಿಸಿ, ಭಾರತದಲ್ಲಿನ ಇವಿಎಂಗಳು ಬ್ಲಾಕ್ ಬಾಕ್ಸ್ ಎಂದು ವ್ಯಾಖ್ಯಾನಿಸಿದ್ದಾರೆ.
ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳು ಬ್ಲ್ಯಾಕ್ ಬಾಕ್ಸ್ ಇದ್ದಂತೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅನುಮತಿ ಇರುವುದಿಲ್ಲ. ನಮ್ಮ ದೇಶದ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಗಂಭೀರ ಸ್ವರೂಪರ ಆರೋಪಗಳು ಕೇಳಿಬರುತ್ತಿವೆ. ಸಾಂಸ್ಥಿಕ ಪಾರದರ್ಶಕತೆ ಇಲ್ಲದಾಗ ಪ್ರಜಾತಂತ್ರ ವ್ಯವಸ್ಥೆಗೆ ದುರ್ಗತಿಯೇ ಕಾದಿರುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಎಕ್ಸ್ ನಲ್ಲಿ ಎಲೆನ್ ಮಸ್ಕ್ ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ.