ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿ ಪೊಲೀಸ್ ಕಸ್ಟಡಿ ಸೇರಿದ್ದಾರೆ. ಇಡೀ ಕೊಲೆ ಪ್ರಕರಣದಲ್ಲಿ 17 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಸದ್ಯ ದರ್ಶನ್ ಸೇರಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಇತ್ತ ದರ್ಶನ್ ನಡತೆಯಿಂದ ಮನನೊಂದಿರುವ ದರ್ಶನ್ ತಾಯಿ ಮೀನಾ ತೂಗುದೀಪ್ ತೀವ್ರ ಆಘಾತಗೊಂಡಿದ್ದಾರೆ. ಕಳೆದರೆಡು ದಿನದಿಂದ ಮನೆಯೊಳಗೆ ಇರುವ ಮೀನಾ ತೂಗುದೀಪ್ ಯಾರೊಂದಿಗೂ ಮಾತನಾಡಲು ಬಯಸುತ್ತಿಲ್ಲ.
ಮೈಸೂರಿನ ಸಿದ್ದಾರ್ಥ ನಗರದ ಮನೆಯಲ್ಲಿರುವ ಮೀನಾ ತೂಗದೀಪ್ ಮಗನ ನೆನೆದು ಕಣ್ಣಿರಿಡುತ್ತಿದ್ದಾರೆ. ತೀವ್ರ ಆಘಾತದಿಂದ ಮನನೊಂದು ಮೂಲೆ ಹಿಡಿದಿರುವ ಅಜ್ಜಿಯನ್ನು ಸಂತೈಸಲು ಮೊಮ್ಮಗ ಚಂದನ್ ಮೈಸೂರಿನ ಅಜ್ಜಿ ಮನೆಗೆ ಬಂದಿದ್ದಾನೆ. ದರ್ಶನ್ ತಾಯಿ ಮೀನಾ ತೂಗುದೀಪ ಅವರ ಆರೈಕೆಗೆ ಆಗಮಿಸಿರುವ ದರ್ಶನ್ ಅಕ್ಕನ ಮಗ ಚಂದನ್ ಹಣ್ಣ, ಹಂಪು, ಊಟ, ತಿಂಡಿ ತಂದು ನೀಡಿ ಅಜ್ಜಿಯ ಆರೈಕೆಯಲ್ಲಿ ತೊಡಗಿದ್ದಾನೆ. ಸದ್ಯ ಅಜ್ಜಿಯ ಜೊತೆಯಲ್ಲಿ ಇರುವ ಚಂದನ್ ಅಜ್ಜಿಯನ್ನು ಸಮಾಧಾನಿಸುವ ಪ್ರಯತ್ನ ಮಾಡಿದ್ದಾನೆ.
ತಾಯಿಯೊಂದಿಗೂ ನಟ ದರ್ಶನ್ ಜಗಳ
ನಟ ದರ್ಶನ್ ಇತ್ತೀಚೆಗೆ ತಾಯಿ ಜೊತೆಗೂ ಜಗಳವಾಡಿಕೊಂಡಿದ್ದಾರೆ. ಜಗಳದ ಬಳಿಕ ತಾಯಿಯೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದರು. ಜೊತೆಗೆ ಹಲವಾರು ದಿನಗಳಿಂದ ತಾಯಿ ಮನೆಗೂ ಭೇಟಿ ನೀಡಿಲ್ಲ. ದರ್ಶನ್ ಕೊಲೆ ಪ್ರಕರಣದ ಬಳಿಕ ತಾಯಿ ಮೀನಾ ತೂಗುದೀಪ್ ಮೌನಕ್ಕೆ ಜಾರಿದ್ದು, ಮಗ ದರ್ಶನ್ ಕುರಿತು ಮಾತನಾಡಲು ನಿರಾಕರಿಸಿದ್ದಾರೆ.
ಇನ್ನೊಬ್ಬ ಪುತ್ರ ದಿನಕರ್ ತೂಗುದೀಪ ಜೊತೆಗಿರುವ ಮೀನಾ ತಮ್ಮ ನೋವುಗಳನ್ನು ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಮನೆ ಒಳಗಡೆ ಇರುವ ದರ್ಶನ್ ತಾಯಿ, ಸಹೋದನ, ಮೊಮ್ಮಗ ಹಾಗೂ ಕುಟುಂಬಸ್ಥರು ಒಳಗಿನಿಂದ ಗೇಟ್‌ಗೆ ಲಾಕ್ ಮಾಡಿದ್ದಾರೆ.