Mysore
24
overcast clouds

Social Media

ಶುಕ್ರವಾರ, 08 ಮೇ 2026
Light
Dark

ಪ್ರಧಾನಿಯಾದ ಮೊದಲ ದಿನವೇ ರೈತರಿಗೆ ಭರ್ಜರಿ ಗಿಫ್ಟ್‌ ಕೊಟ್ಟ ನರೇಂದ್ರ ಮೋದಿ

ನವದೆಹಲಿ: ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಮೊದಲ ದಿನವೇ ದೇಶದ ರೈತರಿಗೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ.

ಅವರು ರೈತರ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಅವರು ಸಹಿ ಹಾಕಿದ್ದಾರೆ. ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆ ಮಾಡುವ ಅಧಿಕಾರ ಪಡೆಯುವ ವೇಳೆ ಈ ಫೈಲ್‌ಗೆ ಅವರು ಸಹಿ ಹಾಕಿದರು.

ಒಟ್ಟು 20 ಸಾವಿರ ಕೋಟಿ ರೂ. ಹಣ ಬಿಡುಗಡೆ ಕಂತಿಗೆ ಅವರು ಸಹಿ ಹಾಕಿದರು. ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ಕೋಟಿ ರೂ. ನಂತೆ ವರ್ಷಕ್ಕೆ 6 ಸಾವಿರ ಕೋಟಿ ರೂ ಹಣ ರೈತರ ಖಾತೆಗಳಿಗೆ ಜಮೆಯಾಗಲಿದೆ.

ಭಾನುವಾರ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನ ಸಭಾಂಗಣದಲ್ಲಿ ದೇಶದ ಪ್ರಧಾನಿಯಾಗಿ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡರು.

Tags:
error: Content is protected !!