Mysore
21
light rain

Social Media

ಶನಿವಾರ, 30 ಮೇ 2026
Light
Dark

ಜಮ್ಮು ಕಾಶ್ಮೀರ: ಯಾತ್ರಾರ್ಥಿಗಳಿದ್ದ ಬಸ್‌ ಮೇಲೆ ಉಗ್ರರ ಗುಂಡಿನ ದಾಳಿ

ಶ್ರೀನಗರ: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಇಂದು(ಜೂ.9) ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್‌ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ 10 ಜನ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಕಾತ್ರಾದಿಂದ ಶಿವಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದಾರೆ. ಪರಿಣಾಮ ಬಸ್‌ ಕಂದಕಕ್ಕೆ ಉರುಳಿದೆ. ಇಂದು ಸಂಜೆ 6.15 ಕ್ಕೆ ತೆರ್ಯಾತ್‌ ಹಳ್ಳಿಯ ಬಳಿ ಈ ಘಟನೆ ನಡೆದಿದೆ.   ಸ್ಥಳಕ್ಕೆ ಅರೆಸೇನಾ ಪಡೆ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಚರಣೆ ನಡೆಸಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Tags:
error: Content is protected !!