Mysore
20
overcast clouds
Light
Dark

ಮೈಸೂರು: ಪ್ರಾಯಾಣಿಕರ ಲ್ಯಾಪ್‌ಟಾಪ್‌ ಹಿಂತಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ

ಮೈಸೂರು: ಪ್ರಯಾಣಿಕರೊಬ್ಬರು ಆಟೋದಲ್ಲಿ ಮರೆತುಹೋಗಿದ್ದ ಬೆಲೆಬಾಳುವ ಲ್ಯಾಪ್‌ಟಾಪ್ ಅನ್ನು ಮೈಸೂರು ಜನತಾನಗರದ ಆಟೋ ಚಾಲಕ ಸುರೇಶ್ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಮಂಗಳೂರಿನ ನಿವಾಸಿ ಕಿಶೋರ್ ಅತ್ತಾವರ್ ಅವರು ಭಾನುವಾರ ಮುಂಜಾನೆ ಮೂರುವರೆ ಸಮಯದಲ್ಲಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.ಅಲ್ಲಿಂದ ಅವರು ಬೋಗಾದಿ ಎರಡನೆ ಹಂತದ ಸಿಎಫ್ ಟಿಆರ್ ಐ ಬಡಾವಣೆಯಲ್ಲಿರುವ ಸ್ನೇಹಿತ ಡಾ.ಎ.ಬಿ.ಅರುಣ್ ಕುಮಾರ್ ಅವರ ಮನೆಗೆ ಆಟೋದಲ್ಲಿ ಬಂದಿದ್ದಾರೆ. ಈ ಸಂದರ್ಭ ಲ್ಯಾಪ್‌ಟಾಪ್ ಅನ್ನು ಆಟೋದಲ್ಲೇ ಮರೆತ್ತಿದ್ದಾರೆ.

ನಂತರ ರೈಲ್ವೆ ನಿಲ್ದಾಣಕ್ಕೆ ಹೋಗಿ ಆಟೋಗಾಗಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಪೆಚ್ಚುಮೊರೆ ಹಾಕಿಕೊಂಡು ಮನೆಗೆ ಹಿಂತಿರುಗಿದಾಗ ಅವರಿಗೊಂದು ಆಶ್ಚರ್ಯ ಕಾದಿತ್ತು ಚಾಲಕ ಸುರೇಶ್ ಇವರ ಮನೆಗೆ ಬಂದು ಲ್ಯಾಪ್‌ಟಾಪ್‌ನ್ನು ಹಿಂತಿರುಗಿಸಿದ್ದರು. ಆತನ ಪ್ರಾಮಾಣಿಕತೆಗೆ ಅಭಿನಂದಿಸಲಾಯಿತು.