Mysore
20
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಟ್ರೋಫಿ ಗೆದ್ದ ಬೆನ್ನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಕೆಆರ್‌ ಬ್ಯಾಟರ್‌ ಅಯ್ಯರ್‌!

2024ರ ಐಪಿಎಲ್‌ ಸೀಸನ್‌ 17ರ ಚಾಂಪಿಯನ್‌ ಕೊಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಎಡಗೈ ದಾಂಡಿದ ವೆಂಕಟೇಶ್‌ ಅಯ್ಯರ್‌ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಕುಟುಂಬದ ಸಮ್ಮುಖದಲ್ಲಿ ಶೃತಿ ರಘುನಾಥನ್‌ ಅವರ ಜತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೆಂಕಟೇಶ್‌ ಅಯ್ಯರ್‌, ಇಂದು (ಜೂನ್‌.2) ವಿವಾಹವಾಗಿದ್ದಾರೆ.

ತಮ್ಮ ದಕ್ಷಿಣ ಭಾರತದ ಸಾಂಪ್ರದಾಯದಂತೆ ಉಡುಗೆ ಧರಿಸಿ ಮದುವೆಯಾಗಿದ್ದಾರೆ. ಸದ್ಯ ಅಯ್ಯರ್‌ ಅವರ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ನವ ಜೋಡಿಗಳಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಸೀಸನ್‌ನಲ್ಲಿ ಕೆಕೆಆರ್‌ ಉತ್ತಮ ಪ್ರದರ್ಶನ ತೋರಿತ್ತು. ಎಲಿಮಿನೇಟರ್‌ ಹಾಗೂ ಪೈನಲ್‌ ಪಂದ್ಯದಲ್ಲಿ ತಂಡದ ಪರವಾಗಿ ಉತ್ತಮ ಪ್ರದರ್ಶನ ತೋರಿದ ಕೆಕೆಆರ್‌ಗೆ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು. ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. 2014ರ ಬಳಿಕ ಮೂರನೇ ಬಾರಿಗೆ 2024ರಲ್ಲಿ ಟ್ರೋಫಿ ಗೆದ್ದು ಬೀಗಿತು.

Tags: