Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಲೋಕಸಮರ 2024: ಪ. ಬಂಗಾಳದಲ್ಲಿ ಇವಿಎಂ, ವಿವಿಪ್ಯಾಟ್‌ಗಳನ್ನು ಚರಂಡಿಗೆ ಎಸೆದ ಕಿಡಿಗೇಡಿಗಳು!

ಪಶ್ಚಿಮ ಬಂಗಾಳ: ಇಂದು ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನಡೆಯುತ್ತಿದೆ. ದೇಶದ ಒಟ್ಟು 57 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. ಕೊನೆಯ ಹಂತದ ಚುನಾವಣೆಯಲ್ಲಿ ಪ್ರಧಾನಿ ಮೋದಿ, ನಟಿ ಕಂಗನಾ ರಣಾವತ್‌ ಸೇರಿದಂತೆ 904 ಅಭ್ಯರ್ಥಿಗಳಿಗೆ ಇಂದಿನ ಮತದಾನದ ಮೂಲಕ ಭವಿಷ್ಯ ರೂಪಿತವಾಗಲಿದೆ.

ಇತ್ತ ಮತದಾನ ಮಾಡುವ ವೇಳೆ ಪಶ್ಚಿಮ ಬಂಗಾಳದಲ್ಲಿ ಗಲಾಟೆ ನಡೆದಿದ್ದು, ಇವಿಎಂ, ವಿವಿಪ್ಯಾಟ್‌ಗಳನ್ನು ಚರಂಡಿಗೆ ಬಿಸಾಕಿರುವ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಸುಮಾರು 6.40 ಸಮಯದಲ್ಲಿ ಬೇನಿಮಾಧವಪುರ ಎಫ್‌ಪಿ ಶಾಲೆಯ ಬಳಿ ಸೆಕ್ಟರ್‌ ಆಫೀಸರ್‌ನ ಮೀಸಲು ಇವಿಎಂ ಮತ್ತು ಪೇಪರ್‌ಗಳನ್ನು ಸ್ಥಳೀಯರು ದಾಳಿ ನಡೆಸಿ ಲೂಟಿ ಮಾಡಿದ್ದಾರೆ. ಮತ್ತು ಅದರಲ್ಲಿ ಎರಡು ವಿವಿ ಪ್ಯಾಟ್‌ಗಳನ್ನು ಚರಂಡಿಗೆ ಬಿಸಾಡಿದ್ದಾರೆ. ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮತ್ತು ಸೆಕ್ಟರ್‌ನ ಎಲ್ಲಾ 6 ಬೂತ್‌ಗಳಿಗೂ ಹೊಸ ಇವಿಎಂ ಹಾಗೂ ವಿವಿ ಪ್ಯಾಟ್‌ಗಳನ್ನು ಒದಗಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಚುನಾವಣಾ ಆಯೋಗ ಮಾಹಿತಿ ನೀಡಿದೆ.

https://x.com/PTI_News/status/1796730626269147468

Tags: