Mysore
23
overcast clouds

Social Media

ಮಂಗಳವಾರ, 28 ಜುಲೈ 2026
Light
Dark

ಲೈಂಗಿಕ ಪ್ರಕರಣ: ಎಸ್ಐಟಿ ಅಂಗಳಕ್ಕೆ ಪ್ರಜ್ವಲ್

ಬೆಂಗಳೂರು: ಲೈಂಗಿಕ ಪ್ರಕರಣದ ಆರೋಪಿ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣರನ್ನು  ಜೂನ್‌ 6 ರವರೆಗೆ ಅಂದರೆ ಏಳು ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಆದೇಶ ಹೊರಡಿಸಿದೆ.

ನಿನ್ನೆ ತಡರಾತ್ರಿ  ಜರ್ಮನಿಯಿಂದ ಬೆಂಗಳೂರಿಗೆ ಬಂದ ಪ್ರಜ್ವಲ್‌ನನ್ನು ಎಸ್‌ಐಟಿ ಬಂಧಿಸಿ, ಇಂದು(ಮೇ 31) ವೈಧ್ಯಕೀಯ ತಪಾಸಣೆ ನಡೆಸಿ, ಬಳಿಕ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.

ಎಸ್‌ಐಟಿ ಪರ ವಕೀಲರ ಪ್ರಜ್ವಲ್‌ ವಿಚಾರಣೆ ಅಗ್ಯವಿರುವುದರಿಂದ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು, ಮನವಿ ಪುರಸ್ಕರಿಸಿದ ಕೋರ್ಟ್‌, ಪ್ರಜ್ವಲ್‌ ನನ್ನು ಏಳು ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಎಸ್‌ಐಟಿ ಪರವಾಗಿ ಎಸ್‌ಪಿಪಿ ಅಶೋಕ್‌ ನಾಯಕ್‌ ಅವರು ವಾದ ಮಂಡಿಸಿದರೆ, ಪ್ರಜ್ವಲ್‌ ಪರ ಅರುಣದ ವಾದ ಮಂಡಿಸಿದರು.

Tags:
error: Content is protected !!