Mysore
15
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಗುಂಡ್ಲುಪೇಟೆ: ಟಿಕೆಟ್‌ ವಿಚಾರಕ್ಕೆ ಕೈ-ಕೈ ಮಿಲಾಯಿಸಿದ ಪೊಲೀಸ್‌-ಕಂಡಕ್ಟರ್‌

ಗುಂಡ್ಲುಪೇಟೆ: ಬಸ್‌ ಟಿಕೆಟ್‌ ವಿಚಾರವಾಗಿ ಪೊಲೀಸ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಕಂಡಕ್ಟರ್‌ ನಡುವೆ ಮಾರಮಾರಿ ನಡೆದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಬಸ್‌ ನಿಲ್ದಾಣದ ಬಳಿ ಗುರುವಾರ(ಮೇ.30) ನಡೆದಿದೆ.

ಗುಂಡ್ಲುಪೇಟೆ ಡಿಪೋ ಕಂಡಕ್ಟರ್‌ ಲೋಕೇಶ್‌ ಹಾಗೂ ಮೈಸೂರು ಸಶಸ್ತ್ರ ಮೀಸಲು ಪಡೆಯ ಕೊಟ್ರೇಶ್‌ ನಡುವೆ ಜಗಳ ಏರ್ಪಟ್ಟಿದೆ. ಕೊಟ್ರೇಶ್‌ ಮತ್ತು ಕುಟುಂಬ ನಿನ್ನೆ ಗುಂಡ್ಲುಪೇಟೆಯ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ವಾಪಸಾಗುವ ವೇಳೆ ಕೊಟ್ರೇಶ್‌ ಚಿಕ್ಕಮ್ಮ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಅವರೇ ಕೊಟ್ರೇಶ್‌ಗೆ ಟಿಕೆಟ್‌ ಸಹಾ ಪಡೆದಿದ್ದಾರೆ. ಆದರೆ, ಇದು ತಿಳಿಯದ ಕೋಟ್ರೇಶ್‌ ತಾವು ಕುಡಾ ಟಿಕೆಟ್‌ ಪಡೆದಿದ್ದಾರೆ.

ಬಸ್‌ನಿಂದ ಇಳಿದ ಬಳಿಕ ಎರಡು ಟಿಕೆಟ್‌ ನೋಡಿ ಈ ಬಗ್ಗೆ ಕಂಡಕ್ಟರ್‌ ಬಳಿ ಪರಿಶೀಲಿಸಿದ್ದಾರೆ, ಪರಿಶೀಲನೆ ನಡೆಸುವ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರು ಸ್ಥಳದಲ್ಲೇ ಬಡಿದಾಡಿಕೊಂಡಿದ್ದಾರೆ.

ಸಿವಿಲ್‌ ಡ್ರೆಸ್‌ನಲ್ಲಿದ್ದ ಕಾಟ್ರೇಶ್‌ಗೆ ಸಾರಿಗೆ ಸಂಸ್ಥೆಯ ಇತರ ಚಾಲಕರು ಕಂಡಕ್ಟರ್‌ ಜತೆ ಸೇರಿ ಕೈ ಮಿಲಾಯಿಸಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆಯ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಇಬ್ಬರು ದೂರು-ಪ್ರತಿದೂರು ನೀಡಿದ್ದಾರೆ.

Tags:
error: Content is protected !!