ನಾವು ಗೂಗಲ್, ಇಂಟರ್‌ನೆಟ್‌ನ್ನು ಸುರಕ್ಷಿತ ಎಂದೇ ಭಾವಿಸಿದ್ದೇವೆ. ಇವುಗಳಲ್ಲಿ ಬ್ರೌಸ್ ಮಾಡುವ ವೆಬ್‌ಸೈಟ್, ಬಳಸುವ ಅಪ್ಲಿಕೇಶನ್ ಎಲ್ಲವೂ ಸುರಕ್ಷಿತ ಎಂದುಕೊಂಡಿದ್ದೇವೆ. ಅದು ನಮ್ಮ ದೊಡ್ಡ ತಪ್ಪು. ಈಗ ಆನ್‌ಲೈನ್ ಕ್ರಿಮಿನಲ್‌ಗಳು, ಹ್ಯಾಕರ್‌ಗಳು ಸಮಾಜದಲ್ಲಿ ಹೆಚ್ಚಾಗುತ್ತಾ ಹೋಗುತ್ತಿದ್ದಾರೆ.
ಆನ್‌ಲೈನ್ ಮೋಸ ಮಾಡಲು, ಮಾಹಿತಿ ಕದಿಯಲು, ಬ್ಯಾಂಕ್ ಅಕೌಂಟ್‌ಗೆ ಕನ್ನ ಹಾಕಲು ಇರುವ ದಾರಿಗಳಲ್ಲಿ ಮೊದಲ ಸಾಲಿನಲ್ಲಿ ಇರುವುದೇ ಈ ‘ಮಾಲ್‌ವೇರ್’ ಹರಡುವುದು. ಈ ಮಾಲ್‌ವೇರ್‌ನಿಂದ ನಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್ ಮಾತ್ರ ವಲ್ಲದೇ ಅವುಗಳ ಬಗ್ಗೆ ತಿಳಿದುಕೊಳ್ಳುವುದೂಅತ್ಯವಶ್ಯ.
‘ಮಾಲ್‌ವೇರ್’ ಎಂಬುದು ಒಂದು ರೀತಿಯ ಸಾಫ್ಟ್‌ವೇರ್. ಇದನ್ನು ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್, ಹೀಗೆ ಹಲವು ರೀತಿಯ ಸಾಫ್ಟ್ ವೇರ್ ಆಧಾರಿತ ಡಿವೈಸ್ ಗಳಿಗೆ ಸಮಸ್ಯೆಯೊಡ್ಡಲು ಹ್ಯಾಕರ್‌ಗಳು
ಡೆವಲಪ್ ಮಾಡಿರುತ್ತಾರೆ. ಮಾಲ್‌ವೇರ್‌ಗಳು ನಿಮ್ಮ ಯಾವುದೇ ಈ ಎಲೆಕ್ಟ್ರಾನಿಕ್ಸ್ ಡಿವೈಸ್‌ನಲ್ಲಿನ ಮಾಹಿತಿಗಳನ್ನು ಕದಿಯಬಹುದು. ನಿಮ್ಮ ಕಂಪ್ಯೂಟರ್ ಅನ್ನು ಸ್ಲೋ ಮಾಡಬಹುದು. ಅಲ್ಲದೇ ನಿಮಗೆ ಗೊತ್ತಿಲ್ಲದಂತೆ ಫೇಕ್ ಇ-ಮೇಲ್ ಅನ್ನು ನಿಮ್ಮ ಇ-ಮೇಲ್ ಗೆ ಕಳುಹಿಸಿ ಸಮಸ್ಯೆ ತಂದೊಡ್ಡಬಲ್ಲವು.
ಇದೊಂದು ಹಾನಿಕಾರಕ ಕಂಪ್ಯೂಟರ್ ಪ್ರೋಗ್ರಾಮ್. ಇದು ಸಿಸ್ಟಮ್ ನಲ್ಲಿನ ಡಾಟಾ ಕಾಪಿ ಮಾಡಿಕೊಳ್ಳಬಲ್ಲದು ಜತೆಗೆ ಕಂಪ್ಯೂಟರ್‌ಗೂ ಹಾನಿ ಮಾಡಬಲ್ಲದು. ಮಾಲ್‌ವೇರ್‌ಗಳು ವಿವಿಧ ಮಾದರಿಯಲ್ಲಿ ನಿಮ್ಮ ಸ್ಟಾರ್ಟ್‌ಫೋನ್, ಕಂಪ್ಯೂಟರ್‌ಗೆ ಬರಬಲ್ಲವು. ಅವುಗಳಲ್ಲಿನ ಕೆಲವು ಸಾಮಾನ್ಯ ವಿಧಾನಗಳೆಂದರೆ…
• 1. ಉಚಿತ ಸಾಫ್ಟ್‌ವೇರ್‌ಗಳ ಮೂಲಕ
ಬರಬಹುದು.
• 2. ಸಾಫ್ಟ್‌ವೇರ್‌ಗಳ ಗುಂಪುಗಳೊಂದಿಗೆ ಮಾಲ್
ವೇರ್ ಬರಬಹುದು.
3. ಮಾಲ್‌ವೇರ್‌ನಿಂದ ಹಾನಿಗೊಳಗಾದ ವೆಬ್
ಸೈಟ್‌ಗೆ ಭೇಟಿ ನೀಡುವುದರಿಂದಲೂ ಬರಬಹುದು. 4. ಫೇಕ್ ಎರರ್ ಮೆಸೇಜ್ ಅಥವಾ ಪಾಪಪ್ ವಿಂಡೋ ಮೇಲೆ ಕ್ಲಿಕ್ ಮಾಡುವ ಮೂಲಕ
ಮಾಲ್‌ವೇರ್ ಡೌನ್‌ಲೋಡ್ ಆಗಬಹುದು.
• 5. ಮಾಲ್‌ವೇರ್ ಇರುವ ಇ-ಮೇಲ್ ಅಟ್ಯಾಚ್‌ಮೆಂಟ್ ಓಪನ್ ಮಾಡುವುದರಿಂದ ಮಾಲ್‌ವೇರ್ ಹರಡುತ್ತದೆ.
• ಮಾಲ್‌ವೇರ್‌ಗಳನ್ನು ತಡೆಗಟ್ಟಲು ನಿಮ್ಮ ಕಂಪ್ಯೂಟರ್, ಸ್ಟಾರ್ಟ್‌ಫೋನ್ ಅನ್ನು ಹಾಗೂ ಅವುಗಳಲ್ಲಿನ ಸಾಫ್ಟ್‌ವೇರ್‌ಗಳನ್ನು ಆಗಾಗ್ಗೆ ಅಪ್ ಡೇಟ್ ಮಾಡುತ್ತಿರಬೇಕು.
• ಯಾವುದೇ ಲಿಂಕ್‌ನ್ನು ಕ್ಲಿಕ್ ಮಾಡುವ ಮೊದಲು, ಸಾಫ್ಟ್‌ವೇರ್, ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು ಪರಿಶೀಲಿಸಿ, ಯೋಚಿಸಿ ನಂತರ ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮ. ಅಲ್ಲದೆ ಇಮೇಲ್ ಹಾಗೂ ಇಮೇಜ್ ಅಟ್ಯಾಚ್‌ಮೆಂಟ್‌ಗಳನ್ನು ಓಪನ್ ಮಾಡುವ ಮೊದಲು ಎಚ್ಚರವಾಗಿರಬೇಕು.