Mysore
22
light rain

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಸಮರಜಿತ್‌ ಲಂಕೇಶ್‌ ಜೊತೆ ವೇದಿಕೆ ಹಂಚಿಕೊಂಡ ಶ್ರೇಯಾಂಕಾ ಪಾಟೀಲ್‌: ಯಾಕೆ ಗೊತ್ತಾ?

ಮೈಸೂರು: ಮಹಿಳಾ ಕ್ರಿಕೆಟ್‌ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌ ಅವರು ನಿರ್ದೇಶಕ ಇಂದ್ರಜೀತ್‌ ಲೋಕೇಶ್‌ ಅವರ ಮಗ, ಯುವ ನಟ ಸಮರಜಿತ್‌ ಲಂಕೇಶ್‌ ಜತೆಯಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಅವರು ಬರ್ಜರಿ ಸ್ಟೆಪ್ಸ್‌ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಇತ್ತೀಚೆಗೆ ಮೈಸೂರಿನಲ್ಲಿ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ತಮ್ಮ ಚಿತ್ರ “ಗೌರಿ”ಯ ಹಾಡುಗಳ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಶ್ರೇಯಾಂಕಾ ಸ್ಟೇಜ್‌ ಮೇಲೆ ಸಮರಜಿತ್‌ ಜೊತೆ ಸಖತ್‌ ಸ್ಟೆಪ್‌ ಹಾಕಿದ್ದಾರೆ.

ಶ್ರೇಯಾಂಕಾ ನೃತ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಮ್ಮ ಹುಡುಗಿ ಶ್ರೇಯಾಂಕಾ, ಆರ್‌ಸಿಬಿ, ಆರ್‌ಸಿಬಿ ಎಂದು ಯುವಕರು ಹುರಿದುಂಬಿಸಿದ್ದಾರೆ.

ಈ ವೀಡಿಯೋವನ್ನು ಶೇಯಾಂಕಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್‌ ಸದ್ದು ಮಾಡುತ್ತಿದೆ.

https://www.instagram.com/p/C7Y7vzYqPDW/?igsh=MWF2dzhrdTgyaHE3MA==

Tags:
error: Content is protected !!