Mysore
17
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮೈಸೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಸಾವು

ಹುಣಸೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬನ್ನಿಕುಪ್ಪೆ ಬಳಿ ನಡೆದಿದೆ.

ಮೈಸೂರು – ಬಂಠ್ವಾಳ ರಾಷ್ಟ್ರೀಯ ಹೆದ್ದಾರಿ 275 ರ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಬಳಿಯಲ್ಲಿ ಘಟನೆ ನಡೆದಿದ್ದು. ಶುಕ್ರವಾರ ರಾತ್ರಿ 9 ಗಂಟೆ ವೇಳೆಯಲ್ಲಿ ಮೈಸೂರು ಕಡಗೆ ನಡೆದು ತೆರಳುತ್ತಿದ್ದ ಮಹಿಳೆಗೆ ಅಪರಿಚಿತವಾಹನ ಡಿಕ್ಕಿ ಹೊಡೆದು ತೀವ್ರಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದಾರಿ ಹೋಕರು ಮಾಹಿತಿ ನೀಡಿದ ಮೇರೆಗೆ ಬಿಳಿಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಹುಣಸೂರು ಶವಾಗಾರಕ್ಕೆ ಸಾಗಿಸಿದ್ದಾರೆ.

ಮಹಿಳೆ ಬಗ್ಗೆ ಮಾಹಿತಿ ಇದ್ದವರು 9480805057 ಗೆ ಸಂಪರ್ಕಿಸುವಂತೆ ಇನ್ಸ್‌ಪೆಕ್ಟರ್‌ ಲೋಲಾಕ್ಷಿ ಮನವಿ ಮಾಡಿದ್ದಾರೆ.

Tags:
error: Content is protected !!