Mysore
22
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬೆಂಗಳೂರು ರೇವ್‌ ಪಾರ್ಟಿ ಪ್ರಕರಣ: ನಟಿ ಹೇಮಾ ಅಸಲಿ ಮುಖ ಬಯಲು

ಬೆಂಗಳೂರು: ನಿನ್ನೆ ( ಮೇ 21 ) ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಜಿಆರ್‌ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡಿದ್ದರು.

ಇನ್ನು ಈ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಹಲವು ಕಲಾವಿದರು ಹಾಗೂ ಮಾಡೆಲ್‌ಗಳು ಭಾಗಿಯಾಗಿದ್ದರು ಎಂದು ಸುದ್ದಿಯಾಗಿತ್ತು. ಹೀಗೆ ಈ ಸುದ್ದಿಯಲ್ಲಿ ತನ್ನ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದ ಹೇಮಾ ತಾನು ಈ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಮತ್ತು ತಾನು ಹೈದರಾಬಾದ್‌ನ ಫಾರ್ಮ್‌ಹೌಸ್‌ನಲ್ಲಿ ಇರುವುದಾಗಿ ಹೇಳಿಕೊಂಡಿದ್ದರು.

ಆದರೆ ಇದೀಗ ಬೆಂಗಳೂರು ಪೊಲೀಸರು ಹಂಚಿಕೊಂಡಿರುವ ಪಾರ್ಟಿಯ ವಿಡಿಯೊದಲ್ಲಿ ನಟಿ ಹೇಮಾ ಇರುವುದು ಖಚಿತವಾಗಿದೆ. ಈ ವಿಚಾರವನ್ನು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಸ್ಪಷ್ಟಪಡಿಸಿದ್ದು, ನಟಿಯ ಅಸಲಿ ಮುಖ ಬಯಲಾಗಿದೆ.

ʼಸನ್‌ ಸೆಟ್‌ ಟು ಸನ್‌ ರೈಸ್‌ ವಿಕ್ಟರಿʼ ಎಂಬ ಹೆಸರಿನ ಅಡಿಯಲ್ಲಿ ಆಯೋಜನೆಯಾಗಿದ್ದ ಈ ಪಾರ್ಟಿಯನ್ನು ಸಂಜೆಯಿಂದ ಬೆಳಗ್ಗೆವರೆಗೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಈ ಪಾರ್ಟಿಯಲ್ಲಿ ಕೊಕೈನ್‌, ಎಂಡಿಎಂಎ ಪಿಲ್ಸ್‌ ಸೇರಿದಂತೆ ಹಲವಾರು ಮಾದಕ ವಸ್ತುಗಳ ಮಾರಾಟ ನಡೆದಿತ್ತು ಎನ್ನಲಾಗಿದೆ. ಹೇಮಾ ಹಂಚಿಕೊಂಡ ವಿಡಿಯೊ ಬಗ್ಗೆ ಮಾತನಾಡಿದ ದಯಾನಂದ್‌ ʼಹೇಮಾ ಪಾರ್ಟಿಯಲ್ಲಿ ಭಾಗಿಯಾಗಿದ್ದು ಸತ್ಯʼ ಎಂದಿದ್ದಾರೆ. ಅಲ್ಲದೇ ʼಯಾವ ಸಂದರ್ಭದಲ್ಲಿ ವಿಡಿಯೊ ಮಾಡಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆʼ ಎಂದು ಹೇಳಿಕೆ ನೀಡಿದ್ದಾರೆ.

Tags: