Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಲೋಕಸಭಾ ಚುನಾವಣೆ 2024: ಐದನೇ ಹಂತದಲ್ಲಿ ದಾಖಲಾಗಿದ್ದು ಶೇ 57.47 ಮತದಾನ

ನವದೆಹಲಿ: 2024ರ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಪೂರ್ಣಗೊಂಡಿದ್ದು, ಇಂದು (ಸೋಮವಾರ, ಮೇ.20) ನಡೆದ ಚುನಾವಣೆಯಲ್ಲಿ ಶೇ.57.47 ರಷ್ಟು ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

5ನೇ ಹಂತದಲ್ಲಿ ಒಟ್ಟು 8 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಈ ಹಂತದಲ್ಲಿ ಒಟ್ಟು 49 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಬೆಳಗ್ಗೆ 7ಕ್ಕೆ ಶರುವಾದ ಮತದಾನ ಸಂಜೆ 7ರವರೆಗೂ ನಡೆಯಿತು.

ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನ ಪ್ರವಾಣ ದಾಖಲಾಗಿದೆ. 5ನೇ ಹಂತದಲ್ಲಿ ಬಿಹಾರದ ಐದು, ಜಮ್ಮುಕಾಶ್ಮೀರದ ಒಂದು, ಜಾರ್ಖಂಡ್‌ನ ಮೂರು ಹಾಗೂ ಲಡಾಕ್‌ನ ಒಂದು, ಮಹಾರಾಷ್ಟ್ರದ 13 ಹಾಗೂ ಒಡಿಶಾದ ಐದು, ಉತ್ತರಪ್ರದೇಶದ 14 ಹಾಗೂ ಪಶ್ಚಿಮ ಬಂಗಾಳದ 7 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು.

49 ಕ್ಷೇತ್ರಗಳಲ್ಲಿ ಒಟ್ಟು 695 ಅಭ್ಯರ್ಥಿಗಳು ಕಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಟ 264 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ (ರಾಯ್‌ಬರೇಲಿ), ಕಿಶೋರಿ ಲಾಲ್ ಶರ್ವಾ (ಆಮೇಠಿ), ಬಿಜೆಪಿ ಸ್ಮತಿ ಇರಾನಿ (ಆಮೇಥಿ), ಪಿಯೂಷ್‌ ಗೋಯಲ್‌ (ಮುಂಬೈ ಉತ್ತರ), ರಾಜನಾಥ ಸಿಂಗ್ (ಲಕ್ನೋ) ಹಾಗ ಚಿರಾಗ್ ಪಾಸ್ವಾನ್ (ಹಾಜಿಪುರ) ಕಣದಲ್ಲಿದ್ದ ಪ್ರಮುಖ ಸ್ಪರ್ಧಿಗಳಿವರು.

Tags:
error: Content is protected !!