Mysore
25
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಕಲಾವಿದರ ಸಂಘಕ್ಕೆ 1 ಕೋಟಿ ದೇಣಿಗೆ ನೀಡಿದ ನಟ ಧನುಷ್‌

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಕಾಲಿವುಡ್‌ ಸ್ಟಾರ್‌ ಧನುಷ್‌ ಅವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಇವರು ತಮಿಳುನಾಡು ನಡಿಗರ್‌ ಸಂಘಕ್ಕೆ ಬರೋಬ್ಬರಿ 1 ಕೋಟಿ ವೈಯಕ್ತಿಕ ಹಣ ನೀಡಿದ್ದಾರೆ.

ತಮಿಳು ನಾಡಿನಲ್ಲಿ ತಲೆಯೆತ್ತುತ್ತಿರುವ ನಡಿಗರ್‌ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಧನುಷ್‌ ತಮ್ಮ ವಯಕ್ತಿಕ ಹಣದಿಂದ 1ಕೋಟಿ ರೂಪಾಯಿಗಳು ದೇಣಿಗೆಯಾಗಿ ನೀಡಿದ್ದಾರೆ. ಇವರ ಈ ಕೆಲಸಕ್ಕೆ ತಮಿಳು ಚಿತ್ರತಂಡ, ಧನುಷ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ದೇಣಿಗೆ ಹಣವನ್ನು ನಟ ಧನುಷ್‌, ಫಿಲ್ಮ್‌ ಚೇಂಬರ್‌ ಅಧ್ಯಕ್ಷ ನಾಸಿರ್‌, ಖಜಾಂಚಿ ಕಾರ್ತಿಕ್‌ ಅವರ ಕೈಗೆ ಚೆಕ್‌ ಮೂಲಕ ಹಸ್ತಾಂತರಿಸಿದ್ದಾರೆ.

ಇನ್ನು ಧನುಷ್‌ ದೇಣಿಗೆ ನೀಡಿದ ವಿಚಾರವನ್ನು ಟ್ರೇಡ್‌ ವಿಶ್ಲೇಷಕ ರಮೇಶ್‌ ಬಾಲ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ದಕ್ಷಿಣ ಭಾರತೀಯ ಕಲಾವಿದರ ಸಂಘದ ಸದಸ್ಯ – ನಟ ಧನುಷ್ ಅವರು ತಮ್ಮ ವೈಯಕ್ತಿಕ ನಿಧಿಯಿಂದ 1 ಕೋಟಿ ಮೊತ್ತವನ್ನು ಹೊಸ ನಾಡಿಗರ ಸಂಗಮ ಕಟ್ಟಡದ ನಿರ್ಮಾಣಕ್ಕೆ ದೇಣಿಗೆ ನೀಡಿದರು. ಅವರು SIAA ಅಧ್ಯಕ್ಷ ತಿರು ಅವರಿಗೆ ಚೆಕ್ ಅನ್ನು ನೀಡಿದರು. ನಾಸರ್, ಖಜಾಂಚಿ ತಿರು. ಕಾರ್ತಿ, ಮತ್ತು ಉಪಾಧ್ಯಕ್ಷ ತಿರು.ಪೂಚಿ ಎಸ್ ಮುರುಗನ್ ಇದ್ದರು. ದಕ್ಷಿಣ ಭಾರತೀಯ ಕಲಾವಿದರ ಸಂಘವು ಅವರ ಕಾರ್ಯಕ್ಕೆ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಧನುಷ್‌ ಅವರು ಕುಬೇರ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು ಇದೇ ತಿಂಗಳು ಅವರು ಬಹು ನಿರೀಕ್ಷಿತ ರಾಯನ್‌ ಚಿತ್ರವೂ ತೆರೆ ಕಾಣಲಿದ್ದು, ಈ ಚಿತ್ರಕ್ಕೆ ಸ್ವತಃ ಧನುಷ್‌ ಆಕ್ಷನ್‌ ಕಟ್‌ ಹೇಳಿದ್ದಾರೆ.

Tags:
error: Content is protected !!