Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಲೋಕಸಮರ 2024: ನಾಲ್ಕನೇ ಹಂತದ ಚುನಾವಣೆಯಲ್ಲಿ ಶೇ. 62.84ರಷ್ಟು ಮತದಾನ

ನವದೆಹಲಿ: ದೇಶಾದ್ಯಂತ 96 ಕ್ಷೇತ್ರಗಳಿಗೆ ಸೋಮವಾರ ರಾತ್ರಿ 8 ಗಂಟೆ ವರೆಗೂ ನಡೆದ ನಾಲ್ಕನೇ ಹಂತದ ಚುನಾವಣೆಯಲ್ಲಿ ಒಟ್ಟು ಶೇ. 62.84ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಳೆದ ಬಾರಿಯ (2019) ಚುನಾವಣೆಗೆ ಹೋಲಿಸಿದರೇ ಶೇ. 2.5ರಷ್ಟು ಕಡಿಮೆ ಮತದಾನ ನಡೆದಿದೆ. ಕಳೆದ ಬಾರಿ 65.51ರಷ್ಟು ಮತದಾನ ನಡೆದಿತ್ತು ಎಂದು ಹೇಳಿದೆ.

ಸೋಮವಾರ ಒಟ್ಟು 10 ರಾಜ್ಯಗಳ 96 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಮತ್ತು ದೇಶಾದ್ಯಂತ ಈವರೆಗೆ 23ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಈವರೆಗೆ 379 ಸ್ಥಾನಗಳಿಗೆ ಮತದಾನ ನಡೆದಿದೆ ಎಂದು ಚನಾವಣಾ ಆಯೋಗ ತಿಳಿಸಿದೆ.

ಇನ್ನು ಒಟ್ಟು ನಾಲ್ಕು ಹಂತದ ಮತದಾನದಲ್ಲಿ ಮೊದಲ ಹಂತದಲ್ಲಿ ಶೇ. 66.14, ಎರಡನೇ ಹಂತದಲ್ಲಿ ಶೇ 66.71, ಮೂರನೇ ಹಂತದಲ್ಲಿ ಶೇ 65.68 ಮತದಾನ ನಡೆದಿವೆ ಎಂದು ಇಸಿಎ ಮಾಹಿತಿ ನೀಡಿದೆ.

Tags: