Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೈಸೂರಿನ ಈ ಪ್ರದೇಶಗಳಲ್ಲಿ ನಾಳೆ (ಮೇ.೧೪) ವಿದ್ಯುತ್ ವ್ಯತ್ಯಯ

ಮೈಸೂರು: ನಗರದ ಹಲವೆಡೆ ನಿರ್ವಹಣಾ ಕಾಮಾಗಾರಿ ಹಮ್ಮಿಕೊಂಡಿರುವುದರಿಂದ ಮೇ.೧೪ ರಂದು ವಿದ್ಯುತ್‌ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚೆಸ್ಕಾಂ ತಿಳಿಸಿದೆ.

66/11 ಕೆ.ವಿ ದೇವನೂರು ಮತ್ತು ರಾಜೀವನಗರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಕ.ವಿ.ಪ್ರ.ನಿ.ನಿ ವತಿಯಿಂದ 2ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿರುವುದರಿಂದ ಬೆಳಿಗ್ಗೆ 10:00 ರಿಂದ ಸಂಜೆ 5:30 ಘಂಟೆಯವರೆಗೆ ವಿದ್ಯುತ್‌ ಪ್ರಸರಣದಲ್ಲಿ ವ್ಯತ್ಯಯ ಉಂಟಾಗಲಿದೆ.

ದೇವನೂರು ವಿದ್ಯುತ್‌ ವಿತರಣಾ ಕೇಂದ್ರದ ವ್ಯಾಪ್ತಿಯ ಬಿ.ಡಿ ಕಾಲೋನಿ, ಅಜೀಜ್ ಸೇಲ್ ನಗರ, 320 ಮನೆ, ಕೆಸರಿ ಕಾಲೋನಿ, ಮಹದೇವಪುರ ಮುಖ್ಯ ರಸ್ತೆ, ಶಕ್ತಿನಗರ, ರಾಜ್‌ಕುಮಾರ್ ರಸ್ತೆ, ಕಲ್ಯಾಣಗಿರಿ, ಅಕ್ಷಯ ಭಂಡಾರ್. ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯ, ಸಾತಗಳ್ಳಿ, ಗಳಗರಹುಂಡಿ, ನೆಹರು ನಗರ, ಸಾತಗಳ್ಳಿ ಗ್ರಾಮ,ಡಿ.ಟಿ.ಎಸ್ ರಾವ್ ನಗರ. ವಿ.ಟಿ.ಯೂ ಕಾಲೇಜು ಎದುರು, ಸನ್ ಪ್ಯೂರ್ ಬಡಾವಣೆ, ಸಾತಗಳ್ಳಿ ಬಿ ಜೋನ್, ವಿಟಿಯೂ ಕಾಲೇಜು, ಭಾರತ್ ನಗರ, ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.

ರಾಜೀವ್‌ನಗರ ವಿ.ವಿ ಕೇಂದ್ರದ ವ್ಯಾಪ್ತಿಯ ರಾಜೀವನಗರ 2ನೇ ಹಂತ, ಕ್ರಿಶ್ಚಿಯನ್ ಕಾಲೋನಿ, ಯಾಸಿನ್ ಮಸ್ಜಿದ್, ಎಸ್.ಬಡಾವಣೆ, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಆಲ್ ಬಜಾರ್ ಮಸ್ಜಿದ್, ವೃತ್ತ, ಅಂಬೇಡ್ಕರ್ ಭವನ ರಸ್ತೆ, ಕ್ಯೂಬಾ ಮಸ್ಜಿದ್ ವೃತ್ತ, ನಾರಾಯಣ ಹೃದಯಾಲಯ ಆಸ್ಪತ್ರೆ, ಕಾಮನಕೆರೆಹುಂಡಿ, ಕೆ.ಹೆಚ್.ಬಿ. ಬಡಾವಣೆ, RTO-55, ಆಸೀನಾ ಬಡಾವಣೆ, ರಾಜೀವನಗರ 3ನೇ ಹಂತ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ಚೆಸ್ಕಾಂ ಮನವಿ ಮಾಡಿದೆ.

 

 

Tags:
error: Content is protected !!