Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದೇಶದ ಜನರು ಸರ್ವಾಧಿಕಾರತ್ವದ ವಿರುದ್ಧ ಹೋರಾಡಬೇಕಿದೆ: ಸಿಎಂ ಕೇಜ್ರಿವಾಲ್‌

ನವದೆಹಲಿ: ನಮ್ಮ ದೇಶಕ್ಕೆ 4000 ಸಾವಿರ ವರ್ಷಗಳ ಇತಿಹಾಸವಿದೆ. ಈ ದೇಶದಲ್ಲಿ ಜನರು ಯಾವತ್ತೂ ಸರ್ವಾಧಿಕಾರತ್ವವನ್ನು ಸಹಿಸಿಕೊಂಡಿಲ್ಲ. ಇಂದು ನಾವೆಲ್ಲರೂ ಸೇರಿಕೊಂಡು ದೇಶವನ್ನು ಸರ್ವಾಧಿಕಾರತ್ವದಿಂದ ರಕ್ಷಿಸಬೇಕಿದೆ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಕರೆ ನೀಡಿದ್ದಾರೆ.

ನಿನ್ನೆ(ಮೇ.10) ಜೈಲಿನಿಂದ ಬಿಡುಗಡೆ ಹೊಂದಿದ ಬಳಿಕ ತೆರೆದ ವಾಹನದಲ್ಲಿ ಸಾವಿರಾರು ಎಎಪಿ ಕಾರ್ಯಕರ್ತರ ನಡುವೆ ತರೆದ ವಾಹನದಲ್ಲಿ ನಿಂತು ಅವರು ಮಾತನಾಡಿದರು.

ನಾನು ಆದಷ್ಟು ಬೇಗ ಬರುತ್ತೇನೆ ಎಂದು ಹೇಳಿದ್ದೆ. ಅದರಂತೆಯೇ ನಿಮ್ಮ ಮುಂದೆ ಬಂದಿರುವುದು ಸಂತೋಷದ ವಿಷಯವಾಗಿದೆ. ಈ ಸಮಯದಲ್ಲಿ ನಾನು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರಿಂದಾಗಿಯೇ ನಾನು ಇಂದು ನಿಮ್ಮ ಮುಂದೆ ನಿಂತಿದ್ದೇನೆ. ದೇಶಾದ್ಯಂತ ಕೋಟ್ಯಾಂತರ ಜನರು ನನಗೆ ಆಶೀರ್ವಾದ ನೀಡಿದ್ದಾರೆ. ಇದಕ್ಕೆ ನಾನು ಋಣಿ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ನಾಳೆ ಬೆಳಿಗ್ಗೆ 11ಗಂಟೆಗೆ ಕನೌಟ್‌ ಪ್ಲೇಸ್‌ ಹನುಮಾನ್‌ ದೇವಾಲಯಕ್ಕೆ ಭೇಟಿ ನೀಡಲಿದ್ದೇನೆ. ದೇವರ ಆಶೀರ್ವಾದ ಪಡೆದು ಮದ್ಯಾಹ್ನ 1 ಗಂಟೆಗೆ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದೇನೆ. ಮತ್ತು ಸಂಜೆ ದಕ್ಷಿಣ ದೆಹಲಿಯ ರೋಡ್‌ ಶೋನಲ್ಲಿ ಭಾಗವಹಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

https://x.com/AamAadmiParty/status/1788927026318987270

 

Tags: