ಗುಂಡ್ಲುಪೇಟೆ: ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ವಿಷಕಾರಿ ಸೊಪ್ಪು ಸೇವಿಸಿದ ಕಾರಣ 10 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಲ್ಲಯ್ಯನಪುರದ ಮಹದೇವಮ್ಮ ಮತ್ತು ದೇವಮ್ಮ ಎಂಬುವವರಿಗೆ ತಲಾ ಐದು ಕುರಿಗಳು ಸಾವಿಗೀಡಾಗಿವೆ. ಕುರಿಗಳ ಮಾಲೀಕರು ಎಂದಿನಂತೆ ಗ್ರಾಮದ ಸಮೀಪದ ಗುಡ್ಡದಲ್ಲಿ ಕುರಿಗಳನ್ನು ಮೇಯಿಸಿದ್ದಾರೆ. ಆದರೆ ವಿಷಕಾರಿ ಸೊಪ್ಪನ್ನು ತಿಂದಿದ್ದ 10 ಕುರಿಗಳು ಸಾವನ್ನಪ್ಪಿವೆ. 3 ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.