Mysore
17
broken clouds

Social Media

ಗುರುವಾರ, 08 ಜನವರಿ 2026
Light
Dark

ರೇವಣ್ಣ ಒಳ್ಳೇ ನಡವಳಿಕೆಯ ವ್ಯಕ್ತಿಯಲ್ಲ: ಬಿಜೆಪಿ ಮುಖಂಡ ಶಿವರಾಮೇಗೌಡ

ಮಂಡ್ಯ: ಶಾಸಕ ಎಚ್‌.ಡಿ ರೇವಣ್ಣ ಒಳ್ಳೆ ನಡವಳಿಕೆಯ ವ್ಯಕ್ತಿಯಲ್ಲ. ಆತನ ವರ್ತನೆ ಸರಿಯಿಲ್ಲ ಹಿಂದೆ ಲಂಡನ್‌ ಹೋಗಿದ್ದಾಗಲೂ ಅಲ್ಲಿಯೂ ಇದೇ ರೀತಿ ಮಾಡಿ ತಗಲಾಕೊಂಡಿದ್ದರು ಎಂದು ಮಾಜಿ ಸಂಸದ ಎಲ್‌.ಆರ್‌ ಶಿವರಾಮೇಗೌಡ ಹೇಳಿದ್ದಾರೆ.

ಪ್ರಜ್ವಲ್‌ ರೇವಣ್ಣ ಇಷ್ಟೆಲ್ಲಾ ದೌರ್ಜನ್ಯ ನಡೆಸುತ್ತಿದ್ದರು, ಅವರ ತಂದೆ ತಾಯಿ ಏನು ಕತ್ತೆ ಕಾಯುತ್ತಿದ್ದರಾ? ಎಂದು ಪ್ರಶ್ನೆ ಮಾಡಿರುವ ಅವರು, ಸರ್ಕಾರ ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದರು.

ಸರ್ಕಾರ ಪೆನ್‌ಡ್ರೈವ್‌ ಸಾರ್ವಜನಿಕರ ಕೈ ಸೇರದಂತೆ ನೋಡಿಕೊಳ್ಳಬೇಕು ಹಾಗೂ ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಮತ್ತು ಚುನಾವನಾ ಇಲಾಖೆ ರೇವಣ್ಣ ಗೆದ್ದರೇ ಆತ ರಾಜೀನಾಮೆ ನೀಡಬೇಕು ಇಲ್ಲದಿದ್ದಲ್ಲಿ ಫಲಿತಾಂಶಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿಯ ಬಾಯಿ ಕಟ್ಟಿಹಾಕಿದಂತಾಗಿದೆ. ಈ ಪೆನ್‌ಡ್ರೈವ್‌ ಪ್ರಕರಣದಿಂದ ಬಿಜೆಪಿಗೂ ಹಿನ್ನಡೆಯಾಗುವ ಸಂಭವವಿದ್ದು, ಕೂಡಲೇ ಎನ್‌ಡಿಎ ಕೂಟದಿಂದ ಜೆಡಿಎಸ್‌ ಪಕ್ಷವನ್ನು ತೆಗೆದುಹಾಕಿ ಅವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Tags:
error: Content is protected !!