Mysore
17
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಎಲ್ಲರಿಗಿಂತಾ ಮೊದಲೇ ಡಿಕೆ ಬ್ರದರ್ಸ್‌ ಕೈ ಸೇರಿತ್ತೇ ಪೆನ್‌ ಡ್ರೈವ್‌: ದೇವರಾಜೇಗೌಡ ಹೇಳಿದ್ದೇನು?

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ದೌರ್ಜಲ್ಯಗಳ ವಿಡಿಯೋ ಪ್ರಕರಣಗಳ ಬಗ್ಗೆ, ಪೆನ್‌ ಡ್ರೈವ್‌ ಲೀಕ್‌ ಮಾಡಿದ್ದರು ಯಾರು ಎಂಬುದನ್ನು ಹಾಸನದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದೇವರಾಜೇಗೌಡ, ಪ್ರಜ್ವಲ್‌ ಅಶ್ಲೀಲ ವಿಡಿಯೋ ವಿಚಾರ 2023 ರಲ್ಲೇ ನನ್ನ ಬಳಿ ಬಂದಿತ್ತು. ಈಗ ಪೆನ್‌ಡ್ರೈವ್‌ನಲ್ಲಿನ ವಿಡಿಯೋಗಳು ಬಹಿರಂಗವಾಗಿರುವುದರ ಹಿಂದೆ ನನ್ನ ಪಾತ್ರ ಇಲ್ಲ. ಆದರೆ ಪ್ರಜ್ವಲ್‌ ಈ ಬಗ್ಗೆ ನ್ಯಾಯಾಲಯದಲ್ಲಿ ಸ್ಟೇ ಪಡೆದುಕೊಂಡಿದ್ದರು. ಆ ಪ್ರಕರಣದಲ್ಲಿ ಪ್ರಜ್ವಲ್‌ ಕಾರು ಚಾಲಕ ಕಾರ್ತಿಕ್‌ 86ನೇ ಪ್ರತಿವಾದಿಯಾಗಿದ್ದರು. ಆತ ನನ್ನ ಬಳಿ ಬಂದು ವಕಾಲತ್ತು ವಹಿಸುವಂತೆ ಮನವಿ ಮಾಡಿದ್ದ, ಆ ವೇಳೆ ಕಕ್ಷಿದಾರನ ಪರವಾಗಿ ವಾದ ಮಂಡಿಸಬೇಕಾಗಿದ್ದರಿಂದ ಪೆನ್‌ಡ್ರೈವ್‌ನಲ್ಲಿ ಏನಿದೆ ಎಂದು ಕೇಳಿದ್ದೆ. ಆವಗಲೇ ನಾನು ಆ ವಿಡಿಯೋಗಳನ್ನು ನೋಡಿದ್ದು ಎಂದು ನಡೆದ ಘಟನೆ ಬಗ್ಗೆ ವಿವರಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಯಾರ ಯಾರ ಬಳಿ ಇದೆ ಎಂದು ನಾನು ಕಾರ್ತಿಕ್‌ ನನ್ನು ಕೇಳಿದ್ದಾಗ, ಅದನ್ನು ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್‌ ಹಾಗೂ ಡಿಕೆ ಸುರೇಶ್‌ ಸೇರಿ ಕೆಲ ಕಾಂಗ್ರೆಸ್‌ ನಾಯಕರಿಗೆ ಕಳುಹಿಸಿದ್ದೆ ಎಂದು ಹೇಳಿದ್ದ ಎಂದರು.

ಈ ವಿಚಾರವಾಗಿ ಪ್ರಧಾನ ಮೋದಿ ಹಾಗೂ ಅಮಿತ್‌ ಶಾ ಅವರಿಗೂ ಪತ್ರ ಬರೆದು ಇ-ಮೇಲ್‌ ಮಾಡಿದ್ದೆ, ಆದ್ರೆ ಇ-ಮೇಲ್‌ ಡೆಲಿವರಿ ಆಗಲಿಲ್ಲ. ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಯೇಂದ್ರ ಅವರಿಗೂ ವಿಡಿಯೋ ಬಗ್ಗೆ ಪತ್ರ ಬರೆದು ಕಳುಹಿಸಿದ್ದೆ. ಆದರೆ ಅವರಿಗೂ ಪತ್ರ ತಲುಪಲಿಲ್ಲ ಎಂಬುದಾಗಿ ಬಿಜೆಪಿ ಮುಖಂಡ ದೇವರಾಜೇಗೌಡ ತಿಳಿಸಿದ್ದಾರೆ.

Tags: