ತಾಂಡವಪುರ: ಮೈಸೂರು-ನಂಜನಗೂಡು ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಂಡವಪುರ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದ ಚಾರಿ ಮತ್ತು ಬೈಕ್ ಸವಾರ ಇಬ್ಬರೂ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ನಂಜನಗೂಡು ತಾಲ್ಲೂಕಿನ ತಾಂಡವಪುರ ಗ್ರಾಮದ ಭೋಗಣ್ಣ ಎಂಬವರ ಮಗ ಶಿವಣ್ಣ (೩೪) ಮತ್ತು ಗಾಳಿಪುರ ಗ್ರಾಮದ ಮಿಥುನ್ (೧೯) ಮೃತಪಟ್ಟವರು.
ತಾಂಡವಪುರ ಗ್ರಾಮದ ಮೂರನೇ ವಾರ್ಡಿನಲ್ಲಿ ಮಿಥುನ್ ತಮ್ಮ ಮತ ಚಲಾಯಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ತಾಂಡವಪುರ ಗ್ರಾಮದ ಶಿವಣ್ಣ ರಸ್ತೆ ದಾಟುತ್ತಿದ್ದಾಗ ಡಿಕ್ಕಿ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡ ಶಿವಣ್ಣ ಮತ್ತು ಬೈಕ್ ಸವಾರ ಗಾಳಿಪುರ ಗ್ರಾಮದ ಮಿಥುನ್ ಸ್ಥಳದಲ್ಲೇ ಮೃತಪಟ್ಟರೆ, ಬೈಕ್‌ನಲ್ಲಿದ್ದ ಹಿಂಬದಿ ಸವಾರ ಮುತ್ತು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.