Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಎಕ್ಸ್‌ ಅಪ್ಲಿಕೇಶನ್ ಸೇವೆಯಲ್ಲಿ ಕೆಲಕಾಲ ವ್ಯತ್ಯಯ

ನವದೆಹಲಿ: ಇಂದು(ಏ.26) ದೇಶಾದ್ಯಂತ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಮತದಾರರು ಮತದಾನ ಮಾಡಿದ ಒಂದು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಖುಷಿ ಪಡುವುದು ಸರ್ವೆ ಸಾಮಾನ್ಯ. ಅದರಂತೆ ಎಕ್ಸ್‌ ಖಾತೆ ಬಳಸಿ ತಮ್ಮ ಚಿತ್ರಗಳನ್ನು ಪೋಸ್ಟ್‌ ಮಾಡಲು ಎಕ್ಸ್‌ ಒಳಗೆ ಬಂದ ಬಳಕೆದಾರರಿಗೆ ಸೇವೆಯಲ್ಲಿ ಸರ್ವರ್‌ ಡೌನ್‌ ಕಾಣಿಸಿಕೊಂಡಿದ್ದು, ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನ ಸುಮಾರು 1.15ರ ಹೊತ್ತಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಎಕ್ಸ್‌ ವೆಬ್‌ಸೈಟ್‌ ಹಾಗೂ ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಡೌನ್‌ಡಿಟೆಕ್ಟರ್‌ ಈ ಕುರಿತು ವರದಿ ಮಾಡಿದೆ. ಶೇ.57 ರಷ್ಟು ಬಳಕೆದಾರರು ಸರ್ವರ್‌ ಸಮಸ್ಯೆ, ಶೇ.36 ರಷ್ಟು ಎಕ್ಸ್‌ ಅಪ್ಲಿಕೇಶನ್‌ನಿಂದ ಸಮಸ್ಯೆ ಹಾಗೂ ಶೇ.7 ರಷ್ಟು ಮಂದಿಗೆ ಲಾಗಿನ್‌ ಸಮಸ್ಯೆಯಾಗಿದೆ ಎಂದು ಬಳಕೆದಾರರು ದೂರಿದ್ದರು. ಈ ಕುರಿತು ಬಳಕೆದಾರರು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ಹೊರಹಾಕಿದ್ದಾರೆ.

Tags: