ಮಂಡ್ಯ : ಲೋಕಸಭಾ ಚುನಾವಣೆಯಲ್ಲಿ ತನ್ನ ಹಕ್ಕು ಚಲಾಯಿಸಲು ದೂರದ ಲಂಡನ್‌ನಿಂದ ಬಂದ ಯುವತಿ.
ಮಂಡ್ಯ ಮೂಲದ ಸೋನಿಕಾ, ಲಂಡನ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೂಲತಃ ಮಂಡ್ಯದ ಕಾಳೇನಹಳ್ಳಿಯ ನಿವಾಸಿಯಾದ ಸೋನಿಕಾ, ಎರಡು ವರ್ಷದ ಹಿಂದೆ ಲಂಡನ್ ಗೆ ತೆರಳಿದ್ದರು. ಲಂಡನ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ವಾರದ ಹಿಂದೆ ಪ್ಲಾನ್ ಮಾಡಿ ಒಂದೂವರೆ ಲಕ್ಷ ಖರ್ಚು ಮಾಡಿ ವಿಶೇಷ ವಿಮಾನದಲ್ಲಿ ಆಗಮಸಿ ಹಕ್ಕು ಚಲಾಯಿಸುವ ಮೂಲಕ ಮತದಾನದ ಪ್ರಾಮುಖ್ಯತೆಯನ್ನು ತಿಳಿಸಿದರು.
ಇನ್ನೋಂದೆಡೆ ಮಂಡ್ಯ ನಗರದ ನಿವೃತ್ತ ತಹಶೀಲ್ದಾರ್ ಕೆ ಎಂ ಸ್ವಾಮಿಗೌಡ ಅವರ ಪುತ್ರಿ ಕೆ ಎಸ್ ಪ್ರಕೃತಿ ಅವರು ಅಮೇರಿಕಾದ ಕ್ಯಾಲಿಪೋರ್ನಿಯಾದಿಂದ ಮಂಡ್ಯಕ್ಕೆ ಆಗಮಿಸಿ ಮಂಡ್ಯ ವಿಶ್ವವಿದ್ಯಾನಿಲಯ ಮತಗಟ್ಟೆ ಸಂಖ್ಯೆ: 167 ರಲ್ಲಿ ಮತದಾನ ಮಾಡಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.