Mysore
19
clear sky

Social Media

ಗುರುವಾರ, 29 ಜನವರಿ 2026
Light
Dark

ಸಿಕ್ಕ ಅವಕಾಶ ಕೈಚೆಲ್ಲಿದೆವು: ಆರ್‌ಸಿಬಿ ಫೈನಲ್‌ ಸೋಲಿನ ಬಗ್ಗೆ ಮರುಗಿದ ಅನಿಲ್‌ ಕುಂಬ್ಳೆ

ಅರ್‌ಸಿಬಿ ಈ ಬಾರಿಯ 2024ರ ಐಪಿಎಲ್‌ನಲ್ಲಿ ತೀರಾ ನೀರಸ ಪ್ರದರ್ಶನ ನೀಡುತ್ತಾ ಬರುತ್ತಿದೆ. ಈವರೆಗೆ ಒಟ್ಟು 17 ಸೀಸನ್‌ಗಳು ನಡೆದಿದ್ದು, ಆರ್‌ಸಿಬಿ ಕೇವಲ ಮೂರು ಬಾರಿ ಮಾತ್ರ ಫೈನಲ್‌ ಹಂತ ತಲುಪಿದೆ. ಉಳಿದಂತೆ ಲೀಗ್‌ನಲ್ಲಿಯೇ ತನ್ನ ಅಧ್ಯಾಯ ಮುಗಿಸಿ ಹೊರ ಬೀಳುತ್ತಿದೆ.

ಇದರ ಬೆನ್ನಲ್ಲೇ ಟೀಂ ಇಂಡಿಯಾದ ಮಿಸ್ಟ್ರಿ ಬೌಲರ್‌ ಕನ್ನಡಿಗ ಅನಿಲ್‌ ಕುಂಬ್ಳೆ ಅವರು ತಾವು ಆರ್‌ಸಿಬಿ ಕ್ಯಾಂಪ್‌ನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಆರ್‌ಸಿಬಿ ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶ ಮಾಡಿದ್ದು ಕನ್ನಡಿಗ ಕುಂಬ್ಳೆ ನಾಯಕತ್ವದಲ್ಲಿ ಎಂಬುದು ವಿಶೇಷ. 2009ರಲ್ಲಿ ಆರ್‌ಸಿಬಿ ನಾಯಕರಾಗಿದ್ದ ಕೆವಿನ್‌ ಪೀಟರ್‌ಸನ್‌ ಅವರು ಅರ್ಧದಲ್ಲಿಯೇ ತವರಿಗೆ ವಾಪಸಾದ ಹಿನ್ನಲೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಅನಿಲ್‌ ಕುಂಬ್ಳೆ ಹೆಗಲ ಮೇಲೆ ಬಿತ್ತು. ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಕುಂಬ್ಳೆ ತಂಡವನ್ನು ಫೈನಲ್‌ಗೆ ಕರೆದುಕೊಂಡು ಹೋದರು.

ಇನ್ನು ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿಗೆ ಡೆಕ್ಕನ್‌ ಚಾರ್ಜರ್ಸ್‌ ಹೈದರಾಬಾದ್‌ ಎದುರಾಗಿತ್ತು. ಇದರಲ್ಲಿ ಆರ್‌ಸಿಬಿ 6 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ತಾವು ಆರ್‌ಸಿಬಿ ನಾಯಕರಾಗಿ ತಂಡವನ್ನು ಮುನ್ನಡೆಸಿದ ಬಗ್ಗೆ ಹಾಗೂ ಫೈನಲ್‌ ಪಂದ್ಯದಲ್ಲಿನ ಎಡವಟ್ಟುಗಳ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅನಿಲ್‌ ಕುಂಬ್ಳೆ. ಈ ಬಗ್ಗೆ ಭಾರತ ತಂಡ ಬೌಲರ್‌ ಆರ್‌. ಅಶ್ವಿನ್‌ ಅವರ ಯುಟೂಬ್‌ ಚಾನೆಲ್‌ ನಲ್ಲಿ ಭಾಗವಹಿಸಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕುಂಬ್ಳೆ ಮಾತನಾಡುತ್ತಾ, 2009ರ ಫೈನಲ್‌ನಲ್ಲಿ ನಾವು ಗೆಲ್ಲಬೇಕಿತ್ತು. ಸಿಕ್ಕ ಸುವರ್ಣಾವಕಾಶವನ್ನು ನಾವು ಕೈಚೆಲ್ಲಿದೆವು ಆ ಮೂಲಕ ಪ್ರಶಸ್ತಿ ನಮ್ಮ ಕೈ ತಪ್ಪಿತು ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡೆಕ್ಕನ್‌ ತಂಡ 143ರನ್‌ ಗಳಿಸಿ 144ರನ್‌ ಗುರಿ ನೀಡಿತು. ಇದನ್ನು ಬೆನ್ನತ್ತಿದ ನಮಗೆ ಕೊನೆಯ ಓವರ್‌ನಲ್ಲಿ 15 ರನ್‌ಗಳ ಅವಶ್ಯಕತೆಯಿತ್ತು. ಕ್ರೀಸ್‌ನಲ್ಲಿ ನಾನು, ಉತ್ತಪ್ಪ ಇದ್ದೆವು. ಡೆಕ್ಕನ್‌ ಪರ ಆರ್‌.ಪಿ ಸಿಂಗ್‌ ಬೌಲರ್‌ ಆಗಿದ್ದರು. ಮೊದಲು ನನಗೆ ಸ್ಟ್ರೈಕ್‌ ಸಿಕ್ಕಿತು. ಮೊದಲ ಬಾಲ್‌ನಲ್ಲಿ ಒಂದು ರನ್‌ ಬಾರಿಸಿದೆ, ಉತ್ತಮ ಎರಡು ಮತ್ತು ಮೂರನೇ ಬಾಲ್‌ಗಳನ್ನು ಎದುರಿಸುವಲ್ಲಿ ವಿಫಲರಾದರು.

ಆರ್‌.ಪಿ ಸಿಂಗ್‌ ಲೆಂತ್‌ ಬಾಲ್‌ ಹಾಕ್ತಾನ್‌ ನೀನು ಸ್ಕೂಪ್‌ ಆಡಬೇಡ ಎಂದು ಉತ್ತಪ್ಪಗೆ ಸೂಚಿಸುತ್ತಿದ್ದೆ, ಆದರೆ ಅವರು ಸ್ಕೂಪ್‌ ಪ್ರಯತ್ನಿಸಿ ಎರಡು ಡಾಟ್‌ ಬಾಲ್‌ ಮಾಡಿದರು, ನಾಲ್ಕನೆ ಎಸೆತ 2 ರನ್‌ ಆದರೆ, ಏದನೇಯದು ಲೆಗ್‌ಬೈ 4 ಆಯಿತು. ಕೊನೆಯ ಎಸೆತವನ್ನು ಸಿಂಗಲ್‌ ಬಾರಿಸಲಷ್ಟೇ ಶಕ್ತರಾದರು. ಆ ಓವರ್‌ನಲ್ಲಿ ನಮಗೆ ಒಂದು ಸಿಕ್ಸರ್‌ ಬೇಕಾಗಿತ್ತು. ನಾನು ಬ್ಯಾಟಿಂಗ್‌ ಸ್ಕ್ರೀಸ್‌ನಲ್ಲಿದ್ದಿದ್ದರೇ ಖಂಡಿತವಾಗಿ ಸಿಕ್ಸರ್‌ ಬಾರಿಸಲು ಪ್ರಯತ್ನಿಸುತ್ತಿದ್ದೆ. ಅಂತಿಮವಾಗಿ ನಾವು 6 ರನ್‌ಗಳಿಂದ ಟ್ರೋಫಿ ಕಳೆದುಕೊಂಡೆವು. ಆ ಒಂದು ಸೋಲು ನನ್ನನ್ನು ಈಗಲೂ ಕಾಡುತ್ತಿದೆ ಎಂದು ಟೀಂ ಇಂಡಿಯಾದ ಮಾಜಿ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಹೇಳಿದ್ದಾರೆ.

Tags:
error: Content is protected !!