Mysore
18
scattered clouds

Social Media

ಶನಿವಾರ, 31 ಜನವರಿ 2026
Light
Dark

ಐಪಿಎಲ್‌ ಲೈವ್‌ಸ್ಟ್ರೀಮಿಂಗ್‌ ಆರೋಪ: ಬಾಹುಬಲಿ ಖ್ಯಾತಿಯ ನಟಿ ತಮನ್ನಾಗೆ ಸಮನ್ಸ್‌!

ಮಹಾರಾಷ್ಟ್ರ: ಸೌತ್‌ ಇಂಡಿಯನ್‌ ಸ್ಟಾರ್‌ ನಟಿ ತಮನ್ನಾ ಅವರು ಮಹದೇವ್‌ ಬೆಟ್ಟಿಂಗ್‌ ಆಪ್‌ನ ಅಂಗಸಂಸ್ಥೆಯಾದ fairplay ಅಪ್ಲಿಕೇಷನ್‌ಗೆ ಪ್ರಚಾರ ಹಾಗೂ ಪ್ರತಿನಿಧಿಸಿದ ಆರೋಪದ ಹಿನ್ನಲೆಯಲ್ಲಿ ಮುಂಬೈನ ಸೈಬರ್‌ ಕ್ರೈಂ ಪೊಲೀಸರು ಸಮನ್ಸ್‌ ನೀಡಿದ್ದಾರೆ.

2023ರ ಐಪಿಎಲ್‌ ಪಂದ್ಯವನ್ನು fairplay ಅಪ್ಲಿಕೇಷನ್‌ನಲ್ಲಿ ಅಕ್ರಮವಾಗಿ ನೇರಪ್ರಸಾರ ಮಾಡುವ ಮೂಲಕ ವಯಕಾಮ್‌ ಸಂಸ್ಥೆಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದ್ದು, ತಮನ್ನಾ ಏಪ್ರಿಲ್‌ 29ರಂದು ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಇವರ ಜೊತೆಗೆ ನಟ ಸಂಜಯ್‌ ದತ್‌ ಅವರಿಗೆ ಸಮನ್ಸ್‌ ನೀಡಲಾಗಿತ್ತು. ಆದರೆ, ತಾವು ವಿದೇಶದಲ್ಲಿರುವುದರಿಂದ ವಿಚಾರಣೆಗೆ ಬೇರೆ ಸಮಯ, ದಿನಾಂಕ ನಿಗದಿ ಮಾಡುವಂತೆ ಅವರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

2023ರ ಐಪಿಎಲ್‌ ಪಂದ್ಯವಳಿಗಳನ್ನು ಫೇರ್‌ಪ್ಲೇ ಅಪ್ಲಿಕೇಷನ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಮಾಡಲಾಗಿತ್ತು. ಈ ಆಪ್‌ಗೆ ತಮನ್ನಾ ಪ್ರಚಾರ ಮಾಡಿದ್ದರು ಎಂದು ದೂರು ದಾಖಲಾಗಿದೆ. ಇವರೊಂದಿಗೆ ನಟ ಸಂಜಯ್‌ ದತ್‌, ಜಾಕ್ವೆಲಿನ್‌ ಫರ್ನಾಂಡಿಸ್‌ ಅವರ ಮ್ಯಾನೇಜರ್‌ಗಳ ಹೇಳಿಕೆಯನ್ನು ಮಹಾರಾಷ್ಟ್ರ ಕ್ರೈಂ ವಿಭಾಗದ ಪೊಲೀಸರು ಪಡೆದಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮಹದೇವ ಬೆಟ್ಟಿಂಗ್‌ ಆಪ್‌ನ ಅಕ್ರಮ ಮತ್ತು ಬೆಟ್ಟಿಂಗ್‌ ಕುರಿತು ತನಿಖಾ ಸಂಸ್ಥೆಗಳು ವಿಚಾರಣೆ ಮಾಡುತ್ತಿದೆ. ಇದರೊಂದಿಗೆ ತಮನ್ನಾ, ಸಂಜಯ್‌ ದತ್‌ ಅವರಿಗೆ ಕ್ರೈಂ ಬ್ರಾಂಚ್‌ ಪೊಲೀಸರು ಸಮನ್ಸ್‌ ನೀಡಿದ್ದಾರೆ.

Tags:
error: Content is protected !!