ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ತನ್ನ ಕೈಚಳಕ ತೋರಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಿನಗಳಲ್ಲಿ ಸುಮಾರು 16 ಕಡೆಗಳಲ್ಲಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ, ವಜ್ರ ಹಾಗೂ ಹಣವನ್ನು ವಶ ಪಡಿಸಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣದ ಶಂಕನಪುರ, ಶಾರದದೇವಿ ರಸ್ತೆ, ಮರ್ಕೈಂಟಲ್ ಬ್ಯಾಂಕ್ ಬಳಿ, ಜಯನಗರ, ಚಾಮರಾಜಪೇಟೆ, ಬಸವನಗುಡಿ ಸೇರಿದಂತೆ ಸುಮಾರು 16 ಕಡೆಗಳಲ್ಲಿ ದಾಳಿ ನಡೆಸಿದ ಇಲಾಖಾ ಅಧಿಕಾರಿಗಳು 16.10 ಕೋಟಿ ಮೌಲ್ಯದ 22ಕೆಜಿ 923ಗ್ರಾಂ ತೂಕದ ಚಿನ್ನ, 6ಕೋಟಿ 45ಲಕ್ಷದ ಬೆಲೆಬಾಳುವ ವಜ್ರ, 1.33 ಕೋಟಿ ರೂ ಹಣ ಪತ್ತೆಯಾಗಿದೆ.
ಬಳ್ಳಾರಿಯಲ್ಲಿ 23 ಲಕ್ಷ ನಗದು ಪತ್ತೆ: ಬ್ರೂಸ್ ಪೊಲೀಸರು, ಎಫ್‌ಎಸ್‌ಟಿ ಹಾಗೂ ವಿವಿಎಸ್‌ಟಿ ಅಧಿಕಾರಿಗಳ ತಂಡದ ಜಂಟಿ ಕಾರ್ಯಾಚರಣೆ ವೇಳೆ ದಾಖಲೆಯಿಲ್ಲದ 23 ಲಕ್ಷ ನಗದು, 450 ಗ್ರಾಂ ಚಿನ್ನ ಹಾಗೂ ಹದಿಮೂರು ಕೆಜಿ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಕೊಂಡಿರುವ ಹಣ, ಚಿನ್ನ ಹಾಗೂ ಬೆಳ್ಳಿಯನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಮಾಹಿತಿ ನೀಡಿದ್ದಾರೆ.