Mysore
23
haze

Social Media

ಭಾನುವಾರ, 04 ಜನವರಿ 2026
Light
Dark

ಮೇಕೆದಾಟು ಯೋಜನೆಗೆ ಎರಡು ರಾಜ್ಯಗಳು ಒಟ್ಟಾಗಿ ಶ್ರಮಿಸಬೇಕು: ಅಣ್ಣಾಮಲೈ

ಮಂಗಳೂರು: ಕಾವೇರಿ ನೀರಿಗಾಗಿ ಮೇಕೆದಾಟು ಯೋಜನೆಯನ್ನು ಜನರು ಭಾವನೆಗಳ ಎಲ್ಲೆ ಮೀರಿ ಎರಡೂ ರಾಜ್ಯಗಳ ಒಳಿತಿಗಾಗಿ ಶ್ರಮಿಸಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿದೆ. ಇದನ್ನು ಬಗೆ ಹರಿಸುವಲ್ಲಿ ಸರ್ಕಾರ ಎಡವಿದೆ. ಇಷ್ಟೆಲ್ಲಾ ಆಗಲು ಕಾಂಗ್ರೆಸ್‌ ಸರ್ಕಾರವೇ ಕಾರಣವಾಗಿದೆ.

ಇಂದು ನಾವು ಎಲ್ಲಾ ಭಾವನೆಗಳನ್ನು ಬದಿಗಿಟ್ಟು ತಮಿಳುನಾಡು ಮತ್ತು ಕರ್ನಾಟಕದ ಕಲ್ಯಾಣಕ್ಕಾಗಿ ಶ್ರಮಿಸಬೇಕಾಗುತ್ತದೆ. ಮೇಕೆದಾಟು ಯೋಜನೆಗೆ ಕಾನೂನಾತ್ಮಕವಾಗಿ ಕೆಲಸ ಮಾಡಲು ಕಾವೇರಿ ನೀರು ಪ್ರಾಧಿಕಾರವಿದ್ದು, ಅದು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

 

Tags:
error: Content is protected !!