Mysore
28
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

IPL 2024: ಗೆಲುವಿನ ನಾಗಾಲೋಟ ಮುಂದುವರೆಸಿದ ಆರ್‌ಆರ್‌: ಮುಂಬೈಗೆ ಮತ್ತೊಂದು ಸೋಲು!

ಜೈಪುರ್‌: ಇಲ್ಲಿನ ಸವಾಯಿ ಮಾನ್‌ಸಿಂಗ್‌ ಮೈದಾನದಲ್ಲಿ ನಡೆದ ಐಪಿಎಲ್‌ ಸಿಸನ್‌ 17ರ 38 ನೇ ಲೀಗ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 179ರನ್‌ ಗಳಸಿ 180 ರನ್‌ಗಳ ಗುರಿ ನೀಡಿತು. ತವರಿನಂಗಳದಲ್ಲಿ ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ ತಂಡ 18.4 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 183 ರನ್‌ ಕಲೆಹಾಕಿ ಜಯದ ನಗೆ ಬೀರಿತು.

ಮುಂಬೈ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ತಂಡಕ್ಕೆ ಆರ್‌ಆರ್‌ ಬೌಲರ್‌ ಸಂದೀಪ್‌ ಶರ್ಮಾ ಕಾಡಿದರು. ಪವರ್‌ ಪ್ಲೇ ನಲ್ಲೇ ಮುಂಬೈ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡರು. ಇಶಾನ್‌ ಕಿಸಾನ್‌ ಶೂನ್ಯ ಸುತ್ತಿ ಔಟಾದರೆ. ಮಾಜಿ ನಾಯಕ ರೋಹಿತ್‌ 6, ಸೂರ್ಯ ಕುಮಾರ್‌ ಯಾದವ್‌ 10 ರನ್‌ ಗಳಿಸಿ ನಿರ್ಗಮಿಸಿದರು.

ಬಳಿಕ ಜೊತೆಯಾದ ತಿಲಕ್‌ ವರ್ಮಾ ಹಾಗೂ ವಧೇರಾ ತಂಡಕ್ಕೆ ಭದ್ರ ಬುನಾದಿ ಹಾಕಿದರು ಈ ಇಬ್ಬರು ಕ್ರಮವಾಗಿ 65 (45 ಎಸೆತ, 5*4, 3*6) ಹಾಗೂ 49(24) ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಉಳಿದಂತೆ ನಬಿ 23, ನಾಯಕ ಹಾರ್ದಿಕ್‌ ಪಾಂಡ್ಯ 10, ಟಿಮ್‌ ಡೇವಿಡ್‌ 3, ಕಾಟ್ಜಿ ಶೂನ್ಯ, ಚಾವ್ಲಾ ಹಾಗೂ ಬುಮ್ರಾ ಔಟಾಗದೇ ಕ್ರಮವಾಗಿ 1, 2 ರನ್‌ ಗಳಿಸಿದರು.

ರಾಜಸ್ಥಾನ್‌ ಪರ ಶಿಸ್ತುಬದ್ಧ ಬೌಲಿಂಗ್‌ ಮಾಡಿದ ಸಂದೀಪ್‌ ಶರ್ಮಾ 4ಓವರ್‌ ಬೌಲಿಂಗ್‌ ಮಾಡಿ 18 ರನ್‌ ನೀಡಿ ಪ್ರಮುಖ 5 ವಿಕೆಟ್‌ ಕಬಳಿಸಿ ಮಿಂಚಿದರು. ಟ್ರೆಂಟ್‌ ಬೌಲ್ಟ್‌ 2, ಚಾಹಲ್‌ ಮತ್ತು ಆವೇಶ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ರಾಜಸ್ಥಾನ್‌ ಇನ್ನಿಂಗ್ಸ್‌: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಆರ್‌ಗೆ ಉತ್ತಮ ಆರಂಭ ಕಂಡುಬಂದಿತು. ಜೋಸ್‌ ಬಟ್ಲರ್‌ ಹಾಗೂ ಜೈಸ್ವಾಲ್‌ ಪವರ್‌ ಪ್ಲೇ ನಲ್ಲಿ 61ರನ್‌ ಗಳ ಜತೆಯಾಟ ನೀಡಿದರು. ಬಟ್ಲರ್‌ 35(25) ಗಳಿಸಿದರೇ, ಜೈಸ್ವಾಲ್‌ ಹಾಗೂ ನಾಯಕ ಸಂಜು ಸ್ಯಾಮ್ಸನ್‌ ಈ ಇಬ್ಬರು ಜತೆಯಾಗಿ ಮುಂಬೈ ಬೌಲರ್‌ಗಳ ಬೆಂಡೆತ್ತಿದರು. ಈ ಇಬ್ಬರು ವಿಕೆಟ್‌ ನೀಡದೇ ಮುಂಬೈ ನೀಡಿದ್ದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿ ಗೆಲುವಿನ ನಗೆ ಬೀರಿದರು.

ಇತ್ತ ಜೈಸ್ವಾಲ್‌ ಮುಂಬೈ ವಿರುದ್ಧ ಐಪಿಎಲ್‌ನಲ್ಲಿ ಎರಡನೇ ಶತಕ ದಾಖಲಿಸಿದರು. ಇವರು 60 ಎಸೆತಗಳಲ್ಲಿ 9ಬೌಂಡರಿ ಹಾಗೂ 7ಸಿಕ್ಸರ್‌ ಸಹಿತ 104 ಭರ್ಜರಿ ಶತಕ ಬಾರಿಸಿ ಮಿಂಚಿದರು. ಜೈಸ್ವಾಲ್‌ಗೆ ಸಾಥ್‌ ನೀಡಿದ ನಾಯಕ ಸಂಜು 38(28) ರನ್‌ಗಳಿಸಿ ಔಟಾಗದೇ ಉಳಿದು ಪಂದ್ಯ ಮುಗಿಸಿದರು.

ಮುಂಬೈ ಪರ ಪಿಯೂಷ್‌ ಚಾವ್ಲಾ ಒಂದು ವಿಕೆಟ್‌ ಪಡೆದರು.

Tags: