Mysore
18
clear sky

Social Media

ಮಂಗಳವಾರ, 20 ಜನವರಿ 2026
Light
Dark

ಕಾಲಿಗೆ ಪೆಟ್ಟು ಮಾಡಿಕೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋರಿಂಗ್‌ ಸ್ಟಾರ್‌!

ಸ್ಯಾಂಡಲ್‌ವುಡ್‌ನ ರೋರಿಂಗ್‌ ಸ್ಟಾರ್‌ ನಟ ಶ್ರೀಮುರಳಿ ಅವರಿಗೆ ಶೂಟಿಂಗ್‌ ವೇಳೆ ಮತ್ತೊಮ್ಮೆ ಪೆಟ್ಟಾಗಿದೆ. ಹೌದು, ʼಬಘೀರಾʼ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟ ಶ್ರೀಮುರುಳಿ ಕಾಲಿಗೆ ಮತ್ತೆ ಗಾಯವಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀಮುರುಳಿ ಅವರ ಬಹು ನಿರೀಕ್ಷಿತ ಚಿತ್ರ ʼಬಘೀರಾʼ ಸಾಕಷ್ಟು ಕುತೂಹಲವನ್ನು ಮೂಡಿಸುತ್ತಿರು ಚಿತ್ರವಾಗಿದೆ. ಈ ಚಿತ್ರದಲ್ಲಿ ಶ್ರೀಮರುಳಿ ಪೊಲೀಸ್‌ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಅಂದಹಾಗೆ ಶ್ರೀಮುರುಳಿ ನಟನೆಯ ಮದಗಜ ಚಿತ್ರ 2021 ರಲ್ಲಿ ಬಿಡುಗಡೆಯಾಗಿತ್ತು. ಇದರ ನಂತರ ಅವರ ನಟನೆಯ ಬೇರಾವುದೇ ಚಿತ್ರ ಈ ವರೆಗೆ ತೆರೆಕಂಡಿಲ್ಲ. ಬಘಿರಾ ಚಿತ್ರತಂಡ ತನ್ನ ಟೀಸರ್‌ ಮೂಲಕ ಆಕ್ಷನ್‌ ಕಥೆಯಾಧರಿತ ಚಿತ್ರ ಮಾಡಲಾಗುವುದು ಎಂದು ಅಭಿಮಾನಿಗಳಿಗೆ ತಿಳಿಸಿತ್ತು.

ʼಮದಗಜʼ ಸೋಲಿನ ನಂತರ ಅಭಿಮಾನಿಗಳಿಗೆ ಒಳ್ಳೇ ಸಿನಿಮಾ ನೀಡಲು ಸ್ವತಃ ಶ್ರೀ ಮುರುಳಿ ಅವರೇ ಯಾವುದೇ ಡೂಪ್‌ ಬಳಸದೇ ಸ್ಟಂಟ್‌ ಸೀನ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಇದೇ ಚಿತ್ರದ ಶೂಟಿಂಗ್‌ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ನಟ, ಎರಡು ತಿಂಗಳ ರೆಸ್ಟ್‌ ಪಡೆದು ಮತ್ತೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು.

ಚಿತ್ರ ತಂಡದೊಂದಿಗೆ ಸೇರಿ ಬಘಿರಾ ಸಿನಿಮಾದ ಬಹು ಮಹತ್ವದ ಸ್ಟಂಟ್‌ ಸೀನ್‌ನಲ್ಲಿ ನಟಿಸುವ ವೇಳೆ ಈಗ ಮತ್ತೆ ಕಾಲಿಗೆ ಪಟ್ಟು ಮಾಡಿಕೊಂಡಿದ್ದಾರೆ ಶ್ರೀಮುರುಳಿ. ಸದ್ಯ ಅವರು ಮೈಸೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಬಘೀರಾ ಚಿತ್ರವನ್ನು ಹೊಂಬಾಳೆ ಬ್ಯಾನರ್‌ ಅಡಿಯಲ್ಲಿ ನಿರ್ಮಿಸುತ್ತಿದ್ದು, ಸೂರಿ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಹಾಗೂ ಸೂರಿ ಕಥೆ ಬರೆದಿದ್ದು, ಪ್ರಕಾಶ್‌ ರಾಜ್‌, ರುಕ್ಮಣಿ ವಸಂತ್‌, ಅಚ್ಚುತ್‌ ಕುಮಾರ್‌, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಂಗಣವೇ ಈ ಚಿತ್ರದಲ್ಲಿದೆ.

Tags:
error: Content is protected !!