ಉಡುಪಿ: ಪ್ರವಾಸಕ್ಕೆಂದು ಉಡುಪಿಯ ಮಲ್ಪೆ ಬೀಚ್‌ಗೆ ತೆರಳದ್ದ ಮೂರು ಜನರ ಯುವಕರಲಲ್ಲಿ ಓರ್ವ ಮರಣ ಹೊಂದಿದ ಘಟನೆ ಭಾನುವಾರ(ಏ.೨೧) ರಂದು ನಡೆದಿದೆ.
ಮೃತ ವ್ಯಕ್ತಿಯನ್ನು ಮಂಡ್ಯ ಮೂಲದ ನಾಗೇಂದ್ರ(೨೧) ಎಂದು ಗುರುತಿಸಲಾಗಿದೆ. ಈತ ಮೂಲತಃ ಮಂಡ್ಯ ಜಿಲ್ಲೆಯವನಾಗಿದ್ದು, ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಎನ್ನಲಾಗಿದೆ. ಇನ್ನುಳಿದಂತೆ ಅನಂತಗೌಡ(೪೭) ಸಂತೋಷ್ (೨೭) ಪ್ರಾಣಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಮಲ್ಪೆಗೆ ಪ್ರವಾಸಕ್ಕೆಂದು ಬಂದ ಇವರು ಭಾನುವಾರ ಮದ್ಯಾಹ್ನ ಬೀಚ್‌ನಲ್ಲಿ ಕಾಲ ಕಳೆಯುವ ವೇಳೆ ಅಲೆಗಳ ಉಬ್ಬರವಿಳಿತ ಹೆಚ್ಚಾಗಿ ಅವರನ್ನು ನೀರು ಸೆಳೆದಿದೆ. ಇದೇ ವೇಳೆ ಬೀಚ್ ನಿರ್ವಹಣೆ ಮಾಡುವ ಓಷಿಯನ್ ಅಡ್ವೆಂಚರ್ಸ್ ಅವರು ಕಾರ್ಯಪ್ರವೃತ್ತರಾಗಿ ದೋಣಿಗಳ ಮೂಲಕ ಮೂವರನ್ನು ರಕ್ಷಿಸುವ ಕೆಲಸ ಮಡಿದ್ದಾರೆ. ಇದರಲ್ಲಿ ನಾಗೇಂದ್ರ ಅದಾಗಳೇ ಸಾಕಷ್ಟು ನೀರು ಕುಡಿದಿದ್ದರಿಂದ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲ ಆಸ್ಪತ್ರೆಗೆ ಸೇರಿಸಿದ್ದರು ಪ್ರಯೋಜನಕ್ಕೆ ಬಾರದೇ ನಾಗೇಂದ್ರ ಕೊನೆಯುಸಿರೆಳೆದಿದ್ದಾನೆ.