ಮುಲ್ಲಾನ್‌ಪುರ: ಇಲ್ಲಿನ ಮಹಾರಾಜ ಯದವೀಂದ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್ ಆವೃತ್ತಿಯ 37ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 3 ವಿಕೆಟ್‌ಗಳ ಗೆಲುವನ್ನು ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 142 ರನ್‌ಗಳಿಗೆ ಆಲ್‌ಔಟ್ ಆಗಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 143 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಗುಜರಾತ್ ಟೈಟನ್ಸ್ 19.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿತು.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ನಾಯಕ ಸಾಮ್ ಕರನ್ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಕಣಕ್ಕಿಳಿದರು. ಪ್ರಭ್‌ಸಿಮ್ರಾನ್ ಸಿಂಗ್ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್ ಸಹ ಮೂವತ್ತರ ಗಡಿ ದಾಟದೇ ಗುಜರಾತ್ ಟೈಟನ್ಸ್ ಬೌಲಿಂಗ್ ದಾಳಿಗೆ ಮಂಕಾದರು. ಸಾಮ್ ಕರನ್ 20 (19) ರನ್ ಗಳಿಸಿದರೆ, ಪ್ರಭ್‌ಸಿಮ್ರಾನ್ ಸಿಂಗ್ 35 (21) ರನ್ ಗಳಿಸಿದರು. ಇನ್ನುಳಿದಂತೆ ರಿಲೇ ರೊಸ್ಸೊ 9 (7) ರನ್, ಜಿತೇಂದ್ರ ಶರ್ಮಾ 13 (12) ರನ್, ಲಿಯಾಮ್ ಲಿವಿಂಗ್‌ಸ್ಟನ್ 6 (9) ರನ್, ಶಶಾಂಕ್ ಸಿಂಗ್ 8 (12) ರನ್, ಅಶುತೋಷ್ ಶರ್ಮಾ 3 (8) ರನ್, ಹರ್‌ಪ್ರೀತ್ ಸಿಂಗ್ 14 (19) ರನ್, ಹರ್‌ಪ್ರೀತ್ ಬ್ರಾರ್ 29 (12) ರನ್, ಹರ್ಷಲ್ ಪಟೇಲ್ ಗೋಲ್ಡನ್ ಡಕ್‌ಔಟ್ ಮತ್ತು ಕಗಿಸೊ ರಬಾಡಾ ಅಜೇಯ 1 (1) ರನ್ ಗಳಿಸಿದರು.
ಗುಜರಾತ್ ಟೈಟನ್ಸ್ ಪರ ಸಾಯಿ ಕಿಶೋರ್ 4 ವಿಕೆಟ್, ನೂರ್ ಅಹ್ಮದ್ ಹಾಗೂ ಮೋಹಿತ್ ಶರ್ಮಾ ತಲಾ ಎರಡೆರಡು ವಿಕೆಟ್ ಮತ್ತು ರಶೀದ್ ಖಾನ್ 1 ವಿಕೆಟ್ ಪಡೆದರು.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ 13 (11) ರನ್ ಹಾಗೂ ನಾಯಕ ಶುಭ್‌ಮನ್ ಗಿಲ್ 35 (29) ರನ್ ಗಳಿಸಿದರು. ಇನ್ನುಳಿದಂತೆ ಸಾಯಿ ಸುದರ್ಶನ್ 31 (34) ರನ್, ಡೇವಿಡ್ ಮಿಲ್ಲರ್ 4 (6) ರನ್, ಅಜ್ಮತ್‌ಉಲ್ಲಾ ಒಮರ್ಜೈ 13 (10) ರನ್, ಶಾರುಖ್ ಖಾನ್ 8 (4) ರನ್, ರಶೀದ್ ಖಾನ್ 3 (3) ರನ್ ಗಳಿಸಿದರು ಮತ್ತು ಯಾವುದೇ ಎಸೆತ ಎದುರಿಸದ ರವಿಶ್ರೀನಿವಾಸನ್ ಸಾಯಿ ಕಿಶೋರ್ ಅಜೇಯರಾಗಿ ಉಳಿದರು. ತಂಡದ ಪರ ಕೊನೆಯ ಹಂತದವರೆಗೂ ಹೋರಾಡಿದ ರಾಹುಲ್ ತೆವಾಟಿಯಾ ಅಜೇಯ 36 (18) ರನ್ ಗಳಿಸಿದರು.
ಪಂಜಾಬ್ ಕಿಂಗ್ಸ್ ಪರ ಹರ್ಷಲ್ ಪಟೇಲ್ 3 ವಿಕೆಟ್, ಲಿಯಾಮ್ ಲಿವಿಂಗ್‌ಸ್ಟನ್ 2 ವಿಕೆಟ್, ಸಾಮ್ ಕರನ್ ಹಾಗೂ ಅರ್ಷ್‌ದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.