Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಲೋಕ ಸಮರ 2024: ಏ.22ರಂದು ಮಣಿಪುರದ 11 ಮತಗಟ್ಟೆಗಳಿಗೆ ಮರು ಮತದಾನ!

ಮಣಿಪುರ: ಏಪ್ರಿಲ್‌ 19ರಂದು ನಡೆದಿದ್ದ ಮಣಿಪುರದ ಇನ್ನರ್‌ ಮಣಿಪುರ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಿಗೆ ಇದೇ ಏ.22 ರಂದು ಮರು ಮತದಾನ ನಡೆಯಲಿದೆ. ಮತದಾನದ ವೇಳೆ ಬೂತ್‌ಗಳಿಗೆ ಬೆಂಕಿ ಹಚ್ಚಿ ವಿದ್ವಂಸಕ ಕೃತ್ಯಗಳನ್ನು ನಡೆಸಿದ ಪರಿಣಾಮ ಚುನಾವಣಾ ಆಯೋಗ ಮರು ಮತದಾನ ನಡೆಸುವಂತೆ ಆದೇಶ ಹೊರಡಿಸಿದೆ.

ಏಪ್ರಿಲ್‌ 19 ರಂದು ಮಣಿಪುರದಲ್ಲಿನ ಸಜೆಬ್, ಖುರೈ, ತೊಂಗಮ್, ಲೈಕೈ ಬಮನ್ ಕಂಪು (ಉತ್ತರ-ಎ), ಬಮನ್ ಕಂಪು (ಉತ್ತರ-ಬಿ), ಬಮನ್ ಕಂಪು (ಆಗ್ನೇಯ-ಪಶ್ಚಿಮ), ಬಮನ್ ಕಂಪು (ಆಗ್ನೇಯ), ಖೋಂಗ್‌ಮನ್ ವಲಯ-ವಿ (ಎ), ಇರೊಯಿಶೆಂಬಾ , ಇರೊಯಿಶೆಂಬಾ ಮಾಮಾಂಗ್ ಲೈಕೈ, ಇರೊಯಿಶೆಂಬಾ ಮಾಯೈ ಲೈಕೈ ಮತ್ತು ಖೈದೆಮ್ ಮಖಾ ಒಳಗೊಂಡಂತೆ ಒಟ್ಟು 11 ಮತಗಟ್ಟೆಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ಬಿಷ್ಣುಪುರ್ ಜಿಲ್ಲೆಯ ಥಮನ್‌ಪೋಕ್ಪಿಯಲ್ಲಿರುವ ಮತಗಟ್ಟೆ ಕೇಂದ್ರದ ಮತಗಟ್ಟೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಈ ಹಿಂಸಾಚಾರ ಮನಗಂಡ ಆಯೋಗ 11 ಮತಗಟ್ಟೆಗಳ ಮತಗಳನ್ನು ಅಸಿಂಧು ಎಂದು ಘೋಷಿಸಿತ್ತು.

ಮಣಿಪುರದಲ್ಲಿ ಮತದಾನದ ವೇಳೆ ನಡೆದ ಹಿಂಸಾಚಾರಕ್ಕೆ ಸಬಂಧಿಸಿದಂತೆ ರಾಜ್ಯದ 47 ಮತಗಟ್ಟೆಗಳಿಗೆ ಮರು ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿತ್ತು. ಆದರೆ ಚುನಾವಣಾ ಆಯೋಗ 11 ಮತಗಟ್ಟೆಗಳಿಗೆ ಮರು ಮತದಾನ ಮಾಡಲು ಅವಕಾಶ ಕಲ್ಪಿಸಿ ಆದೇಶ ನೀಡಿದೆ.

Tags: