ಬೆಂಗಳೂರು: ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಅದರಲ್ಲೂ ರಾಜ್ಯ ಸರ್ಕಾರದಲ್ಲಿ ಪ್ರತಿಪಕ್ಷಗಳು ಕೆಸರೆರಚಾಟಕ್ಕೆ ಮುಂದಾಗಿವೆ. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ಬಿಜೆಪಿ ಮಾಡಿದ ಸಾಧನೆಗಳ ಕುರಿತು ರಾಜ್ಯ ಸರ್ಕಾರ ಚೊಂಬನ್ನು ಪ್ರದರ್ಶಿಸುವ ಮೂಲಕ ಜಾಹೀರಾತು ನೀಡಿತ್ತು. ಇದು ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಜಾಹಿರಾತಿಗೆ ಬಿಜೆಪಿ ಟ್ವಿಟರ್ ಮೂಲಕ ಟಕ್ಕರ್ ಕೊಟ್ಟಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇರುವ ಫೋಟೋ ಒಂದನ್ನು ಹಂಚಿಕೊಂಡಿರುವ ಬಿಜೆಪಿ ಅದಕ್ಕೆ ವ್ಯತ್ಯಾಸ ಇಷ್ಟೇ ಎಂದು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಬರೆದುಕೊಂಡಿದೆ.
ಇನ್ನು ಹಂಚಿಕೊಂಡಿರುವ ಆ ಫೋಟೋದಲ್ಲಿ 2013ರಲ್ಲಿ ಸಿಎಂ ಸಿದ್ದರಾಮಯ್ಯ ಚೊಂಬು ಹಿಡಿದುಕೊಂಡು ಬಯಲಿಗೆ ಹೋಗುತ್ತಿದ್ದರೇ, 2023 ಸ್ವಚ್ಛ್ ಭಾರತ್ ಮಿಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಶೌಚಾಲಯ ಕಡೆಗೆ ಸಿಎಂ ಸಿದ್ದರಾಮಯ್ಯ ಅವರು ನಡೆಕೊಂಡು ಹೋಗುತ್ತಿರುವಂತೆ ಚಿತ್ರದಲ್ಲಿ ತೋರಿಸಲಾಗಿದೆ. ಮತ್ತು ಬಿಜೆಪಿ ಕಾಲದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಅದೇ ಚೊಂಬಿನ ಮೂಲಕ ಬಿಜೆಪಿ ತಿರುಗೇಟು ನೀಡಿದೆ.





