ಮೈಸೂರು : ನನ್ನ ಎಲ್ಲಾ ಕಾರ್ಯಕ್ರಮಗಳಲ್ಲೂ ನನ್ನೆಲ್ಲಾ ಕಾರ್ಯಕರ್ತರು, ನಾಗರಿಕರು ನಿವೆಲ್ಲಾ ಸಹಕಾರ ನೀಡಿದ್ದೀರಾ, ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದೀರಾ, ಅದಕ್ಕೆ ನನ್ನ ಕೃತಜ್ಞತೆಗಳು ಈ ಉತ್ಸಾಹ , ಪ್ರೋತ್ಸಾಹ ಹೀಗೆ ಮುಂದುವರೆಯಲಿ , ಏಪ್ರಿಲ್ 26 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡುವ ಮೂಲಕ ಅದು ಪರಿವರ್ತನೆ ಯಾಗಲಿ ಎಂದು
ಯದುವೀರ್ ಹೇಳಿದರು.
ಅಗ್ರಹಾರದ 101 ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ನಡೆದ ರೋಸ್ ಶೋನಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಪ್ರದಾನ ಮಂತ್ರಿಗಳು ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡಿದ್ದಾರೆ ಎಂದು ನಿಮಗೆಲ್ಲ ತಿಳಿದಿರುವ ವಿಚಾರ, ಅವರು ಸಮಾಜದ ಒಳಿತಿಗಾಗಿ ಪಾರಂಪರೆಯ ರಕ್ಷಣೆಗಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ.
ಅವರ ಕೈ ಬಲ ಪಡಿಸುವ ಮೂಲಕ ಭಾರತ ಹಾಗೆಯೇ ನಮ್ಮ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡೋಣ , ನಮ್ಮ ಪರಂಪರೆ, ಪ್ರಕೃತಿ, ಸಂಸ್ಕೃತಿಯನ್ನು ಉಳಿಸಿ, ಬೆಳೆಸೋಣ ಎಂದರು.
ನಿಮ್ಮೆಲ್ಲರ ಪ್ರೀತಿ ಸಹಕಾರ ಸದಾ ಹೀಗೆ ಇರಲಿ, ಕಮಲದ ಗುರುತಿಗೆ ನನ್ನ ಕ್ರಮ ಸಂಖ್ಯೆ 01 ಕ್ಕೆ ನಿಮ್ಮ ಅತ್ಯ ಅಮೂಲ್ಯವಾದ ಮತ ನೀಡಬೇಕು ಎಂದು ಮನವಿ ಮಾಡಿದರು.
ಇದೆ ಸಂಧರ್ಭದಲ್ಲಿ ಶಾಸಕ ಶ್ರೀವತ್ಸಾ, ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಸೌಮ್ಯ ಉಮೇಶ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು .