Mysore
21
overcast clouds

Social Media

ಶನಿವಾರ, 03 ಜನವರಿ 2026
Light
Dark

ಇವಿಎಂನಲ್ಲಿ ದೋಷ: ಅಣುಕು ಮತದಾನದ ವೇಳೆ ಬಿಜೆಪಿಗೆ ಮತ ಆರೋಪ

ಕೇರಳ: ಇಲ್ಲಿನ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ( ಏಪ್ರಿಲ್‌ 17 ) ನಡೆಸಲಾದ ಅಣುಕು ಮತದಾನದ ವೇಳೆ ಇವಿಎಂ (ವಿದ್ಯುನ್ಮಾನ ಮತಯಂತ್ರ) ನಲ್ಲಿ ದಾಖಲಾದ ಮತವು ತಪ್ಪಾಗಿ ಬಿಜೆಪಿ ಅಭ್ಯರ್ಥಿಗೆ ಹೋಗುತ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಈ ಬಗ್ಗೆ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಆಯೋಗಕ್ಕೆ ದೂರು ನೀಡಿದೆ. ಅಣುಕು ಮತದಾನದ ವೇಳೆ ಎರಡು ಮೂರು ಮತಯಂತ್ರಗಳಲ್ಲಿ ಈ ರೀತಿಯ ದೋಷ ಕಂಡುಬಂದಿದೆ. ಈ ಸಂಬಂಧ ಚುನಾವಣೆ ಆಯೋಗಕ್ಕೆ ದೂರು ನೀಡುವುದಾಗಿ ಸಿಪಿಐ(ಎಂ) ಹಿರಿಯ ನಾಯಕ ಕೆ.ಪಿ ಸತೀಸ್‌ ಚಂದ್ರನ್‌ ಹೇಳಿದ್ದಾರೆ.

ಏಪ್ರಿಲ್‌ 16 ರಂದು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ಸಿಪಿಐ(ಎಂ)ನಿಂದ ಎಂ.ವಿ ಬಾಲಕೃಷ್ಣನ್‌, ಕಾಂಗ್ರೆಸ್‌ನಿಂದ ಹಾಲಿ ಸಂಸದ ರಾಜಮೋಹನ್‌ ಉನ್ನಿತ್ತನ್‌ ಹಾಗೂ ಬಿಜೆಪಿಯಿಂದ ಎಂ.ಎಲ್‌ ಅಶ್ವಿನಿ ಕಣದಲ್ಲಿದ್ದಾರೆ.

Tags:
error: Content is protected !!