Mysore
26
haze

Social Media

ಮಂಗಳವಾರ, 03 ಮಾರ್ಚ್ 2026
Light
Dark

ಡಿ.ಕೆ.ಸುರೇಶ್‌ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ !

ಬೆಂಗಳೂರು :  ಗ್ರಾಮಾಂತರ ಕ್ಷೇತ್ರದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವಂತಹ ಡಿ ಕೆ ಸುರೇಶ್ ಪರಮಾಪ್ತನ ಮನೆಯ ಮೇಲೆ ಇದೀಗ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಡಿಕೆ ಸುರೇಶ್ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆಸಿದ್ದು, ವಾಜರಹಳ್ಳಿಯ ಗಣಪತಿಪುರದಲ್ಲಿರುವ ರಘು ಎಂಬುವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.

ಐಟಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿತು. ಸುಮಾರು ಆರು ಗಂಟೆಗಳ ಕಾಲ ಕಡತಗಳನ್ನ ಪರಿಶೀಲಿಸಿ ಐಟಿ ತಂಡ ಇದೀಗ ವಾಪಸ್ ತೆರಳಿದೆ ಎಂದು ತಿಳಿದು ಬಂದಿದೆ.

Tags:
error: Content is protected !!