ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಪರವಾಗಿ ಪ್ರಚಾರ ಮಾಡಿದ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಖಂಡಿಸಿದ್ದಾರೆ.
ಚನ್ನಪಟ್ಟಣ ತಲೂಕಿನ ಹೊಂಗನೂರಿನಲ್ಲಿ ಮಾತನಾಡಿರುವ ಅವರು, ಇದು ನಮ್ಮ ಸಂಸ್ಕೃತಿಯಲ್ಲ. ಚುನಾವಣೆ ಏನಿದ್ದರು ನಮ್ಮ ತತ್ವ ಸಿದ್ದಾಂತದ ಮೇಲೆ ನಡೆಯಬೇಕು ಚುನಾವಣೆ ಅವರ ವಿರುದ್ಧವಾಗಿ ಸಾಗುತ್ತಿದೆ ಎಂಬ ಹತಾಶೆಯಿಂದ ಈ ರೀತಿಯ ಕೃತ್ಯ ಮಾಡಿರಬೇಕು. ಚುನಾವಣೆಯಲ್ಲಿ ಸಿದ್ದಾಂತದ ಮೇಲೆ ಎದುರಿಸಬೇಕು ಕೃತ್ಯಗಳ ಮೂಲಕವಲ್ಲ ಎಂದು ಕಿಡಿಕಾರಿದ್ದಾರೆ.
ನಮ್ಮ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಈಗಾಗಲೇ ಡಿಐಜಿ ಜೊತೆ ಚರ್ಚಿಸಿದ್ದೇನೆ. ಚುನಾವಣೆಯನ್ನು ಆರೋಗ್ಯಕರವಾಗಿ ಎದುರಿಸುವುದು ಬಿಟ್ಟು ಈ ರೀತಿ ಅಡ್ಡದಾರಿ ಹಿಡಿಯಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಡಾಕ್ಟರ್ ವರ್ಸ್ ಡಾಕು ಎಂಬ ಪದ ಬಳಕೆ ಬಗ್ಗೆಯೂ ಬೇಸರ ವ್ಯಕ್ತಪಡಿಸಿರುವ ಅವರು, ವಯಕ್ತಿಕ ಟೀಕೆಗಳನ್ನು ಚುನಾವಣೆಯಲ್ಲಿ ಮಾಡುವುದು ಸರಿಯಲ್ಲ. ನಮ್ಮ ಸಿದ್ಧಾಂತದ ಆಧಾರದಲ್ಲಿ ಪ್ರಚಾರ ಮಾಡಿ ಎಂದು ಮನವಿ ಮಾಡಿದರು.