ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ತಡರಾತ್ರಿ ಚನ್ನಪಟ್ಟಣ, ಮಾಗಡಿ, ಆನೇಕಲ್ ಮತ್ತು ಕುಣಿಗಲ್ ಭಾಗಗಳ ಸುಮಾರು 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸೇರ್ಪಡೆಗೊಂಡರು.
ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡ ಬಳಿಕ ಮಾತನಾಡಿದ ಡಿಕೆ, ಮೊನ್ನೆ ರಾತ್ರಿಯೂ ಸಹಾ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಈ ಕಾಂಗ್ರೆಸ್ ಸೇರಿರುವವರೆಲ್ಲಾ ಎಚ್.ಡಿ ಕುಮಾರಸ್ವಾಮಿಯ ಕಟ್ಟಾ ಅಭಿಮಾನಿಗಳು ಮತ್ತು ಬೆಂಬಲಿಗರು ಎಂದು ಡಿಕೆ ಹೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರವೊಂದರಲ್ಲೇ ಇದುವರೆಗೆ ಜೆಡಿಎಸ್‌ನಿಂದ ಸುಮಾರು 5000ಕ್ಕೂ ಅಧಿಕ ಮಂದಿ ಮುಖಂಡರು ಕಾಂಗ್ರೆಸ್ ಸೇರಿದ್ದಾರೆ. ಹೊಸದಾಗಿ ಸೇರಿರುವವರ ಭವಿಷ್ಯ ಮುಖ್ಯ ಮತ್ತು ಅದರ ಬಗ್ಗೆಯೂ ತಮ್ಮ ಪಕ್ಷದಲ್ಲಿ ಯೋಚಿಸಬೇಕಾಗುತ್ತದೆ ಎಂದು ಡಿಕೆ ತಿಳಿಸಿದರು.





