ಹೊಸದಿಲ್ಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಪದೇಪದೇ ಅರ್ಜಿ ಸಲ್ಲಿಸುತ್ತಿರುವುದರ ಕುರಿತು ಗರಂ ಆಗಿರುವ ಸುಪ್ರೀಂ ಕೋರ್ಟ್, ಇದು ಜೇಮ್ಸ್ ಬಾಂಡ್ ಸೀಕ್ವೆಲ್ ಅಲ್ಲ ಎಂದು ಕಿಡಿಕಾರಿದೆ.
ಹಂಗಾಮಿ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾಯಮೂರ್ತಿ ಮನ್ಮೀತ್ ಪಿ.ಎಸ್. ಅರೋರಾ ಅವರಿದ್ದ ವಿಭಾಗೀಯ ಪೀಠವು ಅರ್ಜಿದಾರ, ಮಾಜಿ ಎಎಪಿ ಶಾಸಕ ಸಂದೀಪ್ ಕುಮಾರ್ ಅವರಿಗೆ 50 ಸಾವಿರ ದಂಡವನ್ನೂ ಸಹ ವಿಧಿಸಿದೆ.
‘ಒಂದೊಂದು ಭಾಗಗಳನ್ನು ಹೊಂದಿರುವುದಕ್ಕೆ ಇದು ಜೇಮ್ಸ್ ಬಾಂಡ್ ಸಿನಿಮಾ ಸೀಕ್ವೆಲ್ ಅಲ್ಲ. ಈ ಕುರಿತಾಗಿ ಯಾವ ಕ್ರಮ ಕೈಗೊಳ್ಳಬೇಕೆಂಬುದನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಿರ್ಧರಿಸುತ್ತಾರೆ. ರಾಜಕೀಯ ಉದ್ದೇಶದಿಂದ ನೀವು ಇಲ್ಲಿಗೆ ಬಂದಿದ್ದೀರಿ ಅಷ್ಟೆ’ ಎಂದು ಕೋರ್ಟ್ ಅರ್ಜಿದಾರರ ವಿರುದ್ಧ ಕಿಡಿಕಾರಿದೆ.



