Mysore
26
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸಿದ್ದರಾಮಯ್ಯರನ್ನು ಹಾಡಿಹೊಗಳಿದ ಬಿಜೆಪಿ ಅಭ್ಯರ್ಥಿ ರಾಜುಗೌಡ

ಯಾದಗಿರಿ: ಕಾಂಗ್ರೆಸ್‌ನ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿದ್ದ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಮೇ 7 ರಂದು ಉಪ ಚುನಾವಣೆ ನಡೆಯಲಿದೆ. ಕ್ಷೇತ್ರದ ಉಪ ಚುನಾವಣೆ ಹಿನ್ನಲೆ ಬಿಜೆಪಿ ಅಭ್ಯರ್ಥಿ ರಾಜುಗೌಡ ಅಬ್ಬರದ ಮತ ಪ್ರಚಾರ ನಡೆಸಿದ್ದಾರೆ.

ಜಿಲ್ಲೆಯ ಸುರಪುರ ಕ್ಷೇತ್ರದ ವ್ಯಾಪ್ತಿಯ ಗ್ರಾಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಾಜುಗೌಡ, ಸಿಎಂ ಸಿದ್ದರಾಮಯ್ಯರನ್ನ ಹಾಡಿಹೊಗಳಿದ್ದಾರೆ. ಸಿದ್ದರಾಮಯ್ಯ ಧಮ್​ನಿಂದಲೇ ಗೆದ್ದಿದ್ದಾರೆ. ಕಾಂಗ್ರೆಸ್​ಗೆ ಇಷ್ಟು ಸೀಟು ಬಂದಿವೆ. ಸಿದ್ದರಾಮಯ್ಯ ಸಾಹೇಬರನ್ನ ಇಳಿಸಿದರೆ ಸರ್ಕಾರ‌‌ ಉಳಿಯಲ್ಲ. ಗೃಹಲಕ್ಷ್ಮೀ ಹಣ 3 ತಿಂಗಳಿಗೋ 6 ತಿಂಗಳಿಗೋ ಬರುತ್ತೆ. ನಾನು ಗೆದ್ರೆ ಸಿಎಂ ಸಿದ್ದರಾಮಯ್ಯ ಸಾಹೇಬರ ಬಳಿ ಮಾತಾನಾಡಿ ಹಣ ಹಾಕಿಸ್ತೇನೆ. ಕಾಂಗ್ರೆಸ್​ನವರು ಗೆದ್ರೆ ಸಿದ್ದರಾಮಯ್ಯರ ಮುಂದೆ ಮಾತಾಡಲ್ಲ. ಸಿದ್ದರಾಮಯ್ಯನವರು ಹೇ ಅಂದ್ರೆ ಅವರು ಸುಮ್ಮನಾಗುತ್ತಾರೆ. ನಾನಾದರೆ ಅಣ್ಣಾ ಅಂತ ಹೇಳಿ ಕೆಲಸವನ್ನು ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

Tags:
error: Content is protected !!